ಹಿಜಾಬ್ ವಿವಾದ : ಮಡಿಕೇರಿಯಲ್ಲಿ ಪ್ರಾಂಶುಪಾಲರ ಜೊತೆ ವಾದಕ್ಕೆ‌ ನಿಂತ ವಿದ್ಯಾರ್ಥಿನಿಯರು| ಗರಂ ಆದ ಪ್ರಿನ್ಸಿಪಾಲ್ ಮಾಡಿದ್ದಾದರೂ ಏನು ?

ಮಡಿಕೇರಿ : ಹಿಜಾಬ್ ವಿವಾದ ಈಗ ಎಲ್ಲೆಡೆ ಭುಗಿಲೆದ್ದಿದೆ. ಹೈಕೋರ್ಟ್ ನ ಮಧ್ಯಂತರ ಆದೇಶಕ್ಕೂ ವಿದ್ಯಾರ್ಥಿಗಳು ಬೆಲೆ ಕೊಡುತ್ತಿಲ್ಲ. ಹಿಜಾಬ್ ಹಾಕಿಕೊಂಡೇ ಶಾಲೆಗೆ ಬರುತ್ತಿದ್ದಾರೆ. ಇಂಥದ್ದೇ ಒಂದು ಘಟನೆ ಮಡಿಕೇರಿಯ ಜೂನಿಯರ್ ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ಹಾಗೂ ಕಾಲೇಜು ಪ್ರಾಂಶುಪಾಲ ವಿಜಯ ಅವರ ನಡುವೆ ಶುಕ್ರವಾರ ವಾಗ್ವಾದ ನಡೆದಿದೆ.

ಪ್ರಿನ್ಸಿಪಾಲ್ ಜೊತೆ ಮಾತನಾಡುತ್ತಿದ್ದೇನೆ ಎಂಬ ಭಯ, ಭಕ್ತಿ ಇಲ್ಲದೇ ವಿದ್ಯಾರ್ಥಿನಿಯರು ಈ ರೀತಿ ಏರು ಧ್ವನಿಯಲ್ಲಿ ಮಾತನಾಡುತ್ತಿರುವುದರ ಉದ್ದೇಶವಾದರೂ ಏನು ? ಅಷ್ಟು ಮಾತ್ರವಲ್ಲದೇ ವಿದ್ಯಾರ್ಥಿನಿಯರು ಕೊಠಡಿ ಪ್ರವೇಶಿಸಲು ಮುಂದಾದ ಸಂದರ್ಭ ಪ್ರಾಂಶುಪಾಲರು ಅವಕಾಶ ನೀಡಲಿಲ್ಲ. ಹೈಕೋರ್ಟ್ ಆದೇಶದಂತೆ,’ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ತರಗತಿಗೆ ಬರಲು ಅವಕಾಶ ಇಲ್ಲ’ ಎಂದು ಪ್ರಾಂಶುಪಾಲರು ಖಡಾಖಂಡಿತವಾಗಿ ಹೇಳಿದ್ದರು. ನೀವು ಕ್ಲಾಸ್ ಗೆ ಹಿಜಾಬ್ ಧರಿಸಿ ಬರುವುದು ಬೇಡ. ಇಲ್ಲಿ ಬಂದು ಕಿರುಚಿದರೆ ಬೇರೆ ಮಕ್ಕಳಿಗೆ ತೊಂದರೆ ಉಂಟಾಗುತ್ತದೆ ಎಂದು ಹೇಳಿದರು. ಆದರೂ ವಿದ್ಯಾರ್ಥಿನಿಯರು ಮಾತಿಗೆ ಮಾತು ಬೆಳೆಸಿ ಮಾತನಾಡಿದ್ದಾರೆ‌.

ಬಳಿಕ ಪ್ರಾಂಶುಪಾಲರು ‘ ನಾನು ದೂರು ನೀಡುತ್ತೇನೆ. ಇವರನ್ನು ಬಂಧಿಸಿ’ ಎಂದು ಸ್ಥಳದಲ್ಲಿದ್ದ ಪೊಲೀಸರಿಗೆ ತಿಳಿಸಿದರು. ಅನಂತರ ವಿದ್ಯಾರ್ಥಿನಿಯರು ವಾಪಾಸ್ಸಾದರು.

Leave A Reply

Your email address will not be published.