ಅಣ್ಣ ತಂಗಿಯ ಅನೈತಿಕ ಸಂಬಂಧ!! ಎಚ್ಚರಿಕೆ ನೀಡಿದ್ದ ತಾಯಿಯ ಕಥೆ ಕ್ಲೋಸ್

ತುಮಕೂರು: ಮಹಿಳೆಯೋರ್ವಳು ಆಕಸ್ಮಿಕವಾಗಿ ಸಂಪ್ ಗೆ ಬಿದ್ದು ಮೃತಪಟ್ಟ ಪ್ರಕರಣವು ದೊಡ್ಡ ತಿರುವೊಂದನ್ನು ಪಡೆದುಕೊಂಡಿದ್ದು, ಪ್ರಕರಣದ ಸುತ್ತ ಅನೈತಿಕ ಸಂಬಂಧದ ಮಾತು ಕೇಳಿ ಬಂದಿದ್ದು ಆರೋಪಿಗಳ ಬಂಧನವಾಗಿದೆ.

 

ಘಟನೆ ವಿವರ: ತುಮಕೂರು ಜಿಲ್ಲೆಯ ಕೊರಟಗೆರೆ ಎಂಬಲ್ಲಿಯ 30 ವರ್ಷದ ಸಾವಿತ್ರಮ್ಮ ಎಂಬವರು ಆಕಸ್ಮಿಕವಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ಆಕೆಯ ಮಗಳು ಸಂಪ್ ಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪ್ರಕರಣವನ್ನು ದಾಖಲಿಸಿದ್ದಳು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಮಾತ್ರ ಇದೊಂದು ಕೊಲೆಯೆಂದು ಅನುಮಾನ ಮೂಡಿದ್ದು ಇಡೀ ಪ್ರಕರಣವೇ ಕೊಲೆ ಎಂದು ಬಯಲಾಗಿದೆ.

ಆಕೆಯ ಮಗಳು ಶೈಲಜಾ ಎಂಬಾಕೆಗೆ ತನ್ನ ದೊಡ್ಡಮ್ಮನ ಮಗನಾದ ಪುನೀತ್ ಎಂಬಾತನೊಂದಿಗೆ ಅನೈತಿಕ ಸಂಬಂಧವಿದ್ದು ಆತನೊಂದಿಗೆ ತನ್ನ ಮನೆಯಲ್ಲೇ ದೇಹ ಹಂಚಿಕೊಳ್ಳುತ್ತಿದ್ದಳಂತೆ. ಈ ವಿಚಾರ ಸಾವಿತ್ರಮ್ಮ ನಿಗೆ ಗೊತ್ತಾಗಿ ದೊಡ್ಡ ರದ್ಧಾಂತವೇ ನಡೆದು ಇಬ್ಬರಿಗೂ ಎಚ್ಚರಿಕೆ ನೀಡಲಾಗಿತ್ತು.

ಇವರಿಬ್ಬರ ಲವ್ವಿ-ಡವ್ವಿ ಗೆ ಸಾವಿತ್ರಮ್ಮ ಅಡ್ಡ ಬರುತ್ತಾಳೆ ಎಂದು ಘಟನೆಯ ಮುನ್ನ ದಿನ ಇಬ್ಬರೂ ಸೇರಿ ಕೊಲೆಗೆ ಸಂಚು ರೂಪಿಸಿದ್ದರು. ಅದರಂತೆ ಪುನೀತ್ ಶೈಲಜಾ ಮನೆಗೆ ಬಂದಿದ್ದು ಆ ರಾತ್ರಿ ಸಾವಿತ್ರಮ್ಮ ನೊಂದಿಗೆ ಊಟ ಮಾಡಿ ಮನೆಯಲ್ಲೇ ಮಲಗಿದ್ದರು. ಮಧ್ಯರಾತ್ರಿ ಶೈಲಜಾ ಹಾಗೂ ಪುನೀತ್ ಸೇರಿಕೊಂಡು ಮಹಿಳೆ ಸಾವಿತ್ರಮ್ಮನನ್ನು ಮಲಗಿದ್ದಲ್ಲೇ ಕತ್ತು ಹಿಸುಕಿ ಕೊಲೆ ನಡೆಸಿದ್ದಾರೆ.

ಆ ಬಳಿಕ ಆಕೆ ಸಂಪ್ ಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ಸುದ್ದಿ ಹಬ್ಬಿಸಿದ್ದು, ಆಕಸ್ಮಿಕ ಸಾವು ಕೊಲೆಯೆಂದು ಪೊಲೀಸರ ತನಿಖೆಯ ಬಳಿಕ ಬಯಲಾಗಿ ಇಬ್ಬರ ಬಂಧನವಾಗಿದೆ.

Leave A Reply

Your email address will not be published.