ಸ್ಯಾಂಡಲ್ ವುಡ್ ನ ಕಿರಿಯ ನಟ ಧನ್ವೀರ್ ಮೇಲೆ ಹಲ್ಲೆ ಪ್ರಕರಣದಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ.ಸೆಲ್ಫಿ ವಿಚಾರಕ್ಕೆ ಸಂಬಂಧಿಸಿ ಅಭಿಮಾನಿಯೊಬ್ಬರಿಗೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಕಳೆದ ಎರಡು ದಿನಗಳ ಹಿಂದೆ ತೆರೆ ಕಂಡಿದ್ದ ಹೊಸ ಚಿತ್ರದ ಖುಷಿಯಲ್ಲಿದ್ದ ನಟನಿಗೀಗ ಸಂಕಷ್ಟ ಎದುರಾಗಿದೆ.
ಧನ್ವೀರ್ ಹಾಗೂ ಅವರ ಸ್ನೇಹಿತರು ಸೇರಿಕೊಂಡು ಅಭಿಮಾನಿ ಚಂದ್ರಶೇಖರ್ ಎಂಬವರಿಗೆ ನಿಂದಿಸಿ ಹಲ್ಲೆ ನಡೆಸಿ ಒಂದು ಗಂಟೆಗಳ ಕಾಲ ಬಾತ್ ರೂಮ್ ನಲ್ಲಿ ಕೂಡಿ ಹಾಕಿದ್ದರು.ಸೆಲ್ಫಿ ವಿಚಾರದಲ್ಲಿ ನಡೆದ ಜಗಳವು ಮಾತಿಗೆ ಮಾತು ಬೆಳೆದು ಹಲ್ಲೆಯ ಮಟ್ಟಕ್ಕೆ ಬೆಳೆದಿದ್ದು, ಸದ್ಯ ಹಲ್ಲೆಗೊಳಗಾದ ಚಂದ್ರಶೇಖರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೀಡಿಯೋ ಮೂಲಕ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಈ ಬಗ್ಗೆ ಉಪ್ಪಾರಪೇಟೆ ಠಾಣೆಯಲ್ಲಿ ನಟ ಧನ್ವೀರ್ ಹಾಗೂ ಸ್ನೇಹಿತರ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ.
You must log in to post a comment.