ಕಬಕ ಗ್ರಾಮದ ಬೈಪದವು- ಮೂವಳ ಕಲ್ಕುಡ-ಕಲ್ಲುರ್ಟಿ ನೇಮೋತ್ಸವ

ಅನಾದಿ ಕಾಲದಿಂದ ಕಬಕ ಗ್ರಾಮದ ಮೂವಳ ಎಂಬಲ್ಲಿ ನೆಲೆಯಾಗಿದ್ದ ಕಲ್ಕುಡ-ಕಲ್ಲುರ್ಟಿ ವಾರ್ಷಿಕ ನೇಮೋತ್ಸವವು ಬೈಪದವು ಮನೆ ದಿವಂಗತ ಶ್ರೀ ಭೀಮ ಭಟ್ ಮಕ್ಕಳಾದ ಶ್ರೀ ಬಾಲಕೃಷ್ಣ ಭಟ್ ಹಾಗೂ ಶ್ರೀ ರಮೇಶ್ ಭಟ್ ಬೈಪದವು ಸೋದರರ ಮುಂದಾಳುತ್ವದಲ್ಲಿ ದಿನಾಂಕ 17.2.2022 ನೇ ಬುಧವಾರ ಸಂಪ್ರದಾಯಿಕವಾಗಿ ನೆರವೇರಿತು.


ಸುಮಾರು 300 ವರ್ಷಗಳ ಐತಿಹ್ಯವಿರುವ ಈ ದೈವಕ್ಷೇತ್ರವನ್ನು ಬೈಪದವು ರಮೇಶ್ ಭಟ್ ಸಹೋದರರು, ಸ್ಥಳೀಯ ಗ್ರಾಮಸ್ಥರ ಸಂಪೂರ್ಣ ಕರಸೇವೆಯಲ್ಲಿ ಸುಮಾರು ಒಂದು ತಿಂಗಳ ಪೂರ್ವ ಸಿದ್ದತೆಯೊಂದಿಗೆ ಸಂಭ್ರಮದಿಂದ ನೆರವೇರಿತು.

ಪೂರ್ವಾಹ್ನ ತಂತ್ರಿಗಳಾದ ವೇದಮೂರ್ತಿ ಮಿತ್ತೂರು ಶ್ರೀ ಸದಾಶಿವ ಭಟ್ ನೇತ್ರತ್ವದಲ್ಲಿ ಸ್ಥಳ ಶುದ್ದಿ ಹೊಮ,ಬೋಜನ ಕೂಟ, ಸಂಜೆ 6.30 ಬೈಪದವು ಮನೆಯಿಂದ ಒಂದುವರೆ ಕಿ.ಮಿ. ದೂರ ಪಾದಯಾತ್ರೆಯಲ್ಲಿ ಭಂಡಾರ ತಂದು ಗುಡಿಯಲ್ಲಿ ಸ್ಥಾಪನೆ ಮಾಡಿ ಅನ್ನ ಸಂತರ್ಪಣೆ ನೆರವೇರಿಸಲಾಯಿತು. ರಾತ್ರಿ ಗಂಟೆ 10 ರಿಂದ ಕಲ್ಕುಡ-ಕಲ್ಲುರ್ಟಿ ನೇಮೊತ್ಸವ ಜರಗಿತು. ಊರ-ಪರವೂರ ಭಕ್ತಾಧಿಗಳು ಪಾಲ್ಗೊಂಡು ಬೂಲ್ಯ ಪ್ರಸಾದ ಸ್ವೀಕರಿಸಿದರು.


ಧನಸಹಾಯ:
ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಟಾನದ ಅಧ್ಯಕ್ಷತೆ ನಿರ್ವಹಿಸುತ್ತಿರುವ ಬೈಪದವು ಶ್ರೀ ರಮೇಶ್ ಭಟ್ ಸಂಪ್ರತಿಷ್ಟಾನದ ನೂತನ ಕಟ್ಟಡಕ್ಕೆ ರೂಪಾಯಿ ಒಂದು ಲಕ್ಷ ದೇಣಿಗೆ, ನೂಜಿ ಮೂಲ ಮನೆತನದ ರಕ್ತೇಶ್ವರೀ ಸನ್ನಿದಾನ ಜೀರ್ಣೋದ್ಧಾರ ಕ್ಕೆ ರೂಪಾಯಿ ಹತ್ತು ಸಾವಿರ ದೇಣಿಗೆ ಈ ಸಂದರ್ಭದಲ್ಲಿ ಸಮರ್ಪಿಸಿದರು.
