ಚಿಕನ್ 65 ಬಗ್ಗೆ ನಿಮಗೆಷ್ಟು ಗೊತ್ತು : ಇದನ್ನು ಕಂಡು ಹಿಡಿದವರು ಯಾರು ? ಈ ಹೆಸರಿನ ಹಿಂದಿನ ಕಥೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

ಚಿಕನ್ 65 ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಾಂಸಾಹಾರ ಇಷ್ಟಪಡುವ ಎಲ್ಲರಿಗೂ ಇದು ಇಷ್ಟ ಆಗುತ್ತೆ. ಈ ಖಾದ್ಯ ದೇಶದಾದ್ಯಂತ ಬಹಳ‌ ಜನಪ್ರಿಯವಾಗಿದೆ. ಆದರೂ ನಿಮಗೆ ಈ ಚಿಕನ್ 65 ಗೆ ಈ ಹೆಸರು ಬರಲ್ ಕಾರಣವೇನೆಂದು ಗೊತ್ತಿದೆಯೇ ? ಬನ್ನಿ ತಿಳಿಯೋಣ.

ಮಸಾಲೆಯುಕ್ತ ಅತ್ಯಂತ ರುಚಿಕರವಾದ ಈ ಖಾದ್ಯ ದಕ್ಷಿಣ ಭಾರತದ್ದು. ಆನ್ಲೈನ್ ನಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ರೌನಕ್ ರಾಮ್ ಟೆಕೆ ಎಂಬುವವರು ಈ ಖಾದ್ಯಕ್ಕೆ ಹೆಸರು ಹೇಗೆ ಬಂತು ಎಂಬುದರ ಬಗ್ಗೆ ವಿವರಣೆ ನೀಡಿದ್ದಾರೆ.

ತುಂಬಾ ಜನ ಇದಕ್ಕೆ ಈ ಹೆಸರು ಬರಲು ಕಾರಣ ಅದಕ್ಕೆ 65 ಮಾಸಾಲೆಗಳನ್ನು ಹಾಕಿದ ಕಾರಣದಿಂದಾಗಿ, ಕೋಳಿಯನ್ನು 65 ತುಂಡುಗಳನ್ನಾಗಿ ಮಾಡಿದ್ದರಿಂದ, ಚಿಕನ್ ನನ್ನು 65 ದಿನಗಳವರೆಗೆ ಮ್ಯಾರಿನೇಟ್ ಮಾಡಿದ್ದರಿಂದ ಹೀಗೆ ಅದಕ್ಕೆ ಈ ಹೆಸರು ಬಂದಿದ್ದಾರೆ ಎಂದು ತಿಳಿದುಕೊಂಡಿದ್ದಾರೆ.

ಆದರೆ ಈ ಹೆಸರಿನ ನಿಜವಾದ ಕಾರಣವೇನೆಂದರೆ ಅದನ್ನು ತಯಾರಿಸಿದ ವರ್ಷ.

ಈ ಚಿಕನ್ 65 ನ್ನು ಚೆನ್ನೈನ ಬುಹಾರಿ ಹೋಟೆಲ್ ನಲ್ಲಿ 1965 ನೇ ಇಸವಿಯಲ್ಲಿ ತಯಾರಿಸಲಾಯಿತು. ಹಾಗಾಗಿ ಇದನ್ನು ಚಿಕನ್ 65 ಎಂದು ಹೆಸರಿಡಲಾಯಿತು. 1951 ರಲ್ಲಿ ಎಎಂ ಬುಹಾರಿ ಅವರು ಈ ಹೋಟೆಲ್ ನ್ನು ಪ್ರಾರಂಭಿಸಿದರು. ಇದು ಚೆನ್ನೈನಲ್ಲಿ ಆವಾಗಲೇ ತುಂಬಾ ಹೆಸರುವಾಸಿಯಾದ ಹೋಟೆಲ್ ಆಗಿತ್ತು.

ನಮ್ಮ‌ ಭಾರತದಲ್ಲಿರುವ ಪ್ರತಿಯೊಂದು ರಾಜ್ಯವು ವಿವಿಧ ರೀತಿಯ ಆಹಾರ ಪದಾರ್ಥಗಳಿಗೆ ಹೆಸರುವಾಸಿಯಾಗಿದೆ ಎಂದು ವೀಡಿಯೋದಲ್ಲಿ ಹೇಳಲಾಗಿದೆ.

ಈ ವೀಡಿಯೋ ನೋಡಿದವರು ಈ ವಿಷಯ ನಮಗೆ ಗೊತ್ತೇ ಇರಲಿಲ್ಲ ಹಾಗೂ ತಿಳಿಸಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.

Leave A Reply

Your email address will not be published.