ಐದು ವರ್ಷದಲ್ಲಿ ಆಲ್ಕೋಹಾಲ್ ಸೇವನೆ ಪ್ರಮಾಣ ಕುಸಿತ

ಕಳೆದ ಐದು ವರ್ಷಗಳಲ್ಲಿ ಆಲೋಹಾಲ್ ಸೇವನೆ ಪ್ರಮಾಣ ದೇಶದಲ್ಲಿ ಕುಸಿತಗೊಂಡಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಬಹಿರಂಗಪಡಿಸಿದೆ.

 

ಈ ವರದಿ ಕೋವಿಡ್-19 ಸೋಂಕು ದೇಶದಲ್ಲಿ ಕಾಣಿಸಿಕೊಂಡ ವರ್ಷದ ಹೊರತಾಗಿದೆ ಎಂದಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019 ರಿಂದ 2021 ರವರೆಗೆ ಎರಡು ಹಂತಗಳಲ್ಲಿ ಈ ಸಂಶೋಧನೆ ನಡೆಸಿದೆ. 15 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಲ್ಲಿ ಅಲೋಹಾಲ್ ಸೇವನೆಯ ಪ್ರಮಾಣವು ಶೇ 18.8 ರಷ್ಟಿದೆ.

2015-16 ರ ಸಮೀಕ್ಷೆಯಲ್ಲಿ ದ ಶೇ 29.2ರಷ್ಟರಿಂದ ಕಡಿಮೆಯಾಗಿದೆ ಎಂದು ತಿಳಿಸಿದೆ. ಈ ಹಿಂದಿನ ಸಮೀಕ್ಷೆಯಲ್ಲಿ ಈಶಾನ್ಯ ಮತ್ತು ಪೂರ್ವ ರಾಜ್ಯಗಳು ಮದ್ಯ ಸೇವನೆಯಲ್ಲಿ ಅಧಿಕ ದಾಖಲೆ ಹೊಂದಿದ್ದವು.

ಆದರೆ, ಇದೀಗ ಮದ್ಯ ಸೇವನೆಯ ಶೇಕಡಾವಾರು ಕಡಿಮೆಯಾಗಿದೆ. 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

Leave A Reply

Your email address will not be published.