ಮಲ್ಪೆ:ರೆಸಾರ್ಟ್ ನಲ್ಲಿ ಅನ್ಯಕೋಮಿನ ಜೋಡಿ ಪತ್ತೆ |ಬಜರಂಗದಳ ಕಾರ್ಯಕರ್ತರಿಂದ ಪೊಲೀಸರಿಗೆ ಮಾಹಿತಿ

Share the Article

ಮಲ್ಪೆ: ಅನ್ಯಕೋಮಿನ ಜೋಡಿಯೊಂದು ರೆಸಾರ್ಟ್ ನಲ್ಲಿ ಇದ್ದು,ಬಜರಂಗದಳ ಕಾರ್ಯಕರ್ತರು ಪತ್ತೆಹಚ್ಚಿ ಮಲ್ಪೆ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

ಬಡನಿಡಿಯೂರಿನಲ್ಲಿನ ರೆಸಾರ್ಟ್ ಒಂದರಲ್ಲಿ ಬ್ರಹ್ಮಾವರದ ಯುವತಿ ಹಾಗೂ ಹುಬ್ಬಳ್ಳಿಯ ಅನ್ಯಕೋಮಿನ ಯುವಕ ಕಳೆದ ರಾತ್ರಿ ಕೊಠಡಿ ಬುಕ್
ಮಾಡಿದ್ದರು.ಜೋಡಿ ಒಟ್ಟಾಗಿರುವುದನ್ನು ಕಂಡ ಸಂಘಟನಾ ಕಾರ್ಯಕರ್ತನೋರ್ವ ಸಂಘಟನೆಯ ಮುಖಂಡರಿಗೆ ತಿಳಿಸಿದ್ದು, ತಕ್ಷಣವೇ ನೂರಕ್ಕೂ ಹೆಚ್ಚು ಜನ ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು. ಬಳಿಕ ಮಲ್ಪೆ ಪೊಲೀಸರಿಗೆ ಜೋಡಿಯನ್ನು ಒಪ್ಪಿಸಿದ್ದಾರೆ ಎನ್ನಲಾಗಿದೆ.

Leave A Reply