ಫ್ಯಾಕ್ಟ್ ಚೆಕ್ | ಬಾಲಕಿ ಹಿಂದೆ ಓಡುತ್ತಿರುವ ಪತ್ರಕರ್ತನ ವೀಡಿಯೋ| ಟ್ರೋಲ್ ಗೊಳಗಾದ ವೀಡಿಯೋ ಪೂರ್ಣ ಸತ್ಯವಲ್ಲ| ವೀಡಿಯೋ ಬಗ್ಗೆ ಅಸಲಿ ಮಾಹಿತಿ ಇಲ್ಲಿದೆ!
ನಿನ್ನೆಯಷ್ಟೇ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಒಳಪಟ್ಟಿತ್ತು. ಅದೇನೆಂದರೆ ಹಿಜಾಬ್ ಧರಿಸಿದ ಪುಟ್ಟ ಬಾಲಕಿಯ ಹಿಂದೆ ಓಡಿದ ಪತ್ರಕರ್ತ ಎಂದು. ಬಾಲಕಿಗೆ ವರದಿಗಾರರು ತೊಂದರೆ ಕೊಡುತ್ತಿದ್ದಾರೆ ಎಂದು ಟ್ರೋಲ್ ಆಗಿತ್ತು. ಆದರೆ ಈ ಹೇಳಿಕೆಗೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಒಳಗಾದ ಪತ್ರಕರ್ತ ಕಿರಣ್ ಕಂಕಾರಿ ಬಾಲಕಿಯ ಹೇಳಿಕೆಯನ್ನು ಪಡೆಯುವ ಉದ್ದೇಶದಿಂದ ಓಡಿದ್ದಾರೆ. ಅಷ್ಟೇ. ಬಾಲಕಿಯೂ ಸಹ ಸ್ವಲ್ಪ ಓಡಿ ನಂತರ ನಿಂತಿದ್ದಾಳೆ. ಈಗ ಟ್ರೋಲ್ ಆಗುತ್ತಿರುವ ವೀಡಿಯೋ ಹಿಂದಿನ ಹಾಗೂ ಮುಂದಿನ ಭಾಗಗಳನ್ನು ಗಮನಿಸಿದಾಗ ಕಿರಣ್ ಕಂಕಾರಿ ಅವರು ಬಾಲಕಿಯ ವೀಡಿಯೋ ತೆಗೆಯುವ ಸಂದರ್ಭದಲ್ಲಿ ಬಾಲಕಿಯು ಅಲ್ಲೇ ನಿಂತಿದ್ದಾಳೆ. ನಂತರ ಅವರು ಬಾಲಕಿ ನಿಂತ ಜಾಗಕ್ಕೆ ಹೋಗಿ ಬೈಟ್ ತಗೊಂಡಿದ್ದಾರೆ. ನಂತರ ಬಾಲಕಿ ಶಾಲೆಗೆ ಹೋಗಿದ್ದಾಳೆ. ಆಯ್ದ ವೀಡಿಯೋ ಭಾಗ ಮಾತ್ರ ಟ್ರೋಲ್ ಮಾಡಿ ಅರ್ಧ ಸತ್ಯ ತೋರಿಸಿ ಇದೇ ಪೂರ್ಣ ಸತ್ಯ ಎಂದು ಬಿಂಬಿಸುವ ಪ್ರಯತ್ನ ಸಾಮಾಜಿಕ ಜಾಲತಾಣದಲ್ಲಿ ನಡೆಸಲಾಗುತ್ತಿದೆ.
ಕಿರಣ್ ಕಂಕಾರಿ ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಜವಾಬ್ದಾರಿಯುತ ಪತ್ರಕರ್ತನಾಗಿ ಕೆಲಸ ಮಾಡಿದ್ದಾರೆ.