ಪುತ್ತೂರು: ಪರ್ಸ್,ಮೊಬೈಲ್ ಮನೆಯಲ್ಲಿ ಬಿಟ್ಟು ರಿಕ್ಷಾ ಚಾಲಕ ನಾಪತ್ತೆ

Share the Article

ಪುತ್ತೂರು: ಆಟೋ ರಿಕ್ಷಾ ಚಾಲಕರೊಬ್ಬರು ತನ್ನ ಮೊಬೈಲ್ ಮತ್ತು ಪರ್ಸ್ ಅನ್ನು ಮನೆಯಲ್ಲೇ ಇಟ್ಟು ರಿಕ್ಷಾದಲ್ಲಿ ಬಾಡಿಗೆಗಾಗಿ ತೆರಳಿ ನಾಪತ್ತೆಯಾಗಿರುವುದಾಗಿ ಬಲ್ನಾಡಿನಿಂದ ವರದಿಯಾಗಿದೆ.

ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಉಜ್ರುಪಾದೆ ನಿವಾಸಿ ಸುಂದರ ಪಿ ಅವರು ನಾಪತ್ತೆಯಾದವರು

ಅವರು ಫೆ.13 ರಂದು ಮನೆಯಿಂದ ಆಟೋ ರಿಕ್ಷಾದಲ್ಲಿ ಬಾಡಿಗೆಗಾಗಿ ಮನೆಯಿಂದ ತೆರಳಿದ್ದರು. ಆದರೆ ಮನೆಗೆ ಬಾರದ ಸುಂದರ ಅವರಿಗೆ ಮೊಬೈಲ್ ಫೋನ್ ಕರೆ ಮಾಡಿದಾಗ ಅವರ ಮೊಬೈಲ್ ಮನೆಯಲ್ಲೇ ಇರುವುದು ಬೆಳಕಿಗೆ ಬಂದಿತ್ತು.

ಈ ಕುರಿತು ಸುಂದರ ಅವರ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

Leave A Reply