ಇಂದಿನಿಂದ ಪ್ಲಾಸ್ಟಿಕ್ ಸಂಪೂರ್ಣ ಬ್ಯಾನ್!

ನವದೆಹಲಿ : ಪರಿಸರಕ್ಕೆ ಹಾನಿ ಮಾಡುವ ಏಕ ಬಳಕೆಯ ಪ್ಲಾಸ್ಟಿಕ್ ಇಂದಿನಿಂದ ನಿಷೇಧವಾಗಲಿದ್ದು, ಅದರ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯಲ್ಲಿ ತೊಡಗಿರುವ ಎಲ್ಲರಿಗೂ ಕೇಂದ್ರ ಮಾಲಿನ್ಯ ಮಂಡಳಿ ( CPCB) ಸೂಚನೆ ನೀಡಿದೆ.

ಏಕಬಳಕೆಯ ಪ್ಲಾಸ್ಟಿಕ್ ಗಳು ಪರಿಸರಕ್ಕೆ ಅತ್ಯಂತ ಹಾನಿಕಾರಕವೆಂದು ಪರಿಸರಕ್ಕೆ ಹಾನಿ ಉಂಟು ಮಾಡುವುದರಿಂದ ನಿಷೇಧಕ್ಕೆ ಹೇಳಲಾಗಿದೆ. ಪ್ಲಾಸ್ಟಿಕ್ ಧ್ವಜಗಳಿಂದ ಹಿಡಿದು ಇಯರ್ ಬಡ್ ಗಳವರೆಗೆ , ಪ್ಲಾಸ್ಟಿಕ್ ಸ್ಪೂನ್, ಗ್ಲಾಸ್, ಫ್ಲ್ಯಾಗ್, ಬ್ಯಾನರ್ ಸೇರಿ ಏಕ ಬಳಕೆಯ ಪ್ಲಾಸ್ಟಿಕ್ ಗಳನ್ನು ನಿಷೇಧಿಸಲಾಗಿದೆ.

ಏಕಬಳಕೆಯ ಪ್ಲಾಸ್ಟಿಕ್ ನ್ನು ಸುಲಭವಾಗಿ ನಾಶಪಡಿಸಲಾಗುವುದಿಲ್ಲ ಅಥವಾ ಮರುಬಳಕೆ ಕೂಡ ಮಾಡಲಾಗುವುದಿಲ್ಲ. ಈ ಪ್ಲಾಸ್ಟಿಕ್ ನ್ಯಾನೋ ಕಣಗಳು, ನೀರು ಮತ್ತು ಭೂಮಿಯನ್ನು ಕರಗಿಸಿ ಕಲುಷಿತಗೊಳಿಸಲಾರಂಭಿಸುತ್ತದೆ. ಜಲಚರಗಳಿಗೆ ತುಂಬಾ ಹಾನಿ ಉಂಟಾಗುತ್ತದೆ.

ಕಾಲಮಿತಿಯೊಳಗೆ ದಾಸ್ತಾನು ಮುಗಿಸುವಂತೆ‌ ಎಲ್ಲಾ ದಾಸ್ತಾನುದಾರರು, ಉತ್ಪಾದಕರು, ಅಂಗಡಿಯವರು, ಇ ಕಾಮರ್ಸ್ ಕಂಪನಿಗಳು, ಬೀದಿ ವ್ಯಾಪಾರಿಗಳು, ಮಾಲ್ ಗಳು, ಮಾರುಕಟ್ಟೆಗಳು, ಶಾಪಿಂಗ್ ಕೇಂದ್ರಗಳು, ಚಿತ್ರಮಂದಿರಗಳು, ಪ್ರವಾಸಿ ಸ್ಥಳಗಳು, ಶಾಲೆಗಳು, ಕಾಲೇಜುಗಳ, ಕಚೇರಿ, ಆಸ್ಪತ್ರೆಗಳು ಮತ್ತು ಇತರ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಈ ವಸ್ತುಗಳ ಉತ್ಪಾದನೆ ಬಳಕೆ ನಿಷೇಧ ಮಾಡಲು ಸಂಸ್ಥೆ ಹೇಳಿದೆ.

ಆಗಸ್ಟ್ 2021 ರಲ್ಲಿ ಕೇಂದ್ರ ಪರಿಸರ ಸಚಿವರು ಇದನ್ನು ನಿಷೇಧಿಸಲು ಅಧಿಸೂಚನೆಯನ್ನು ಹೊರಡಿಸಿದ್ದರು. ನಷ್ಟದ ಕಾರಣದಿಂದಾಗಿ ಜುಲೈ 1 ರಿಂದ ಇಂತಹ ಎಲ್ಲಾ‌ ವಸ್ತುಗಳನ್ನು ನಿಷೇಧಿಸುವಂತೆ ಕೋರಲಾಗಿತ್ತು. ಹಾಗಾಗಿ ಜೂನ್ 30 ರೊಳಗೆ ಈ ವಸ್ತುಗಳ ನಿಷೇಧದ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲು ಹೇಳಲಾಗಿತ್ತು.

Leave A Reply

Your email address will not be published.