ಮುಸ್ಲಿಂ ಸಮುದಾಯದಲ್ಲಿ ಹಿಜಾಬ್ ಅನಿವಾರ್ಯವಲ್ಲ| ಹಿಜಾಬ್ ಕುರಿತಾಗಿ ಕುರಾನ್ ನಲ್ಲಿ ಉಲ್ಲೇಖ ಇಲ್ಲ- ಕೇರಳ ಗವರ್ನರ್‌ ಮೊಹಮ್ಮದ್ ಖಾನ್

ಹಿಜಾಬ್ ವಿವಾದ ಈಗ ರಾಷ್ಟ್ರ ವ್ಯಾಪಿ ಚರ್ಚೆಗೊಳಪಟ್ಟ ವಿಷಯವಾಗಿ ಬಿಟ್ಟಿದೆ. ಹೈಕೋರ್ಟ್ ಈಗ ಇದಕ್ಕೆ ಮಧ್ಯಂತರ ತೀರ್ಪು ನೀಡಿದೆ. ಆದರೂ ಇನ್ನೂ ಕೂಡಾ ಈ ವಿಷಯದ ಬಗ್ಗೆ ಮಾತುಗಳು ನಡೆತಾನೇ ಇದೆ. ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತಿರೋರು ಯಾರು? ಯಾಕೆ ಈ ವಿಷಯ ಬಂತು. ಇದಕ್ಕೆಲ್ಲಾ ಇನ್ನು ಮುಂದಿನ ಸಮಯದಲ್ಲಿ ನಮಗೆ ಉತ್ತರ ದೊರಕಬಹುದು.

ಈಗ ಕೇರಳ ಗವರ್ನರ್ ಮೊಹಮ್ಮದ್ ಖಾನ್ ಅವರು ಈ ಹಿಜಾಬ್ ಬಗ್ಗೆ ಪ್ರತಿಕ್ರಿಯೆಯೊಂದನ್ನು ನೀಡಿದ್ದಾರೆ. ‘ ಮುಸ್ಲಿಂ ಸಮುದಾಯದಲ್ಲಿ ಹಿಜಾಬ್ ಅನಿವಾರ್ಯವಲ್ಲ. ಹಿಜಾಬ್ ಕುರಿತಾಗಿ ಕುರಾನ್ ನಲ್ಲಿ ಯಾವುದೇ ಉಲ್ಲೇಖ ಇಲ್ಲ ಎಂದು ಹೇಳಿದ್ದಾರೆ.

ಹಿಜಬ್ ಇಸ್ಲಾಂನ ಆಚರಣೆಯಲ್ಲಿ ಅಂತರ್ಗತವಾಗಿಲ್ಲ. ಸಿಖ್ಖರಿಗೆ ಟರ್ಬನ್ ರೀತಿಯಲ್ಲಿ ಇದ್ದ ಹಾಗೆ ಮುಸ್ಲಿಂ ಮಹಿಳೆಯರಿಗೆ ಹಿಜಬ್ ಅನಿವಾರ್ಯವಲ್ಲ. ಟರ್ಬನ್ ಧರಿಸಲು ಕೆಲವೊಂದು ಕಾಲೇಜುಗಳು ಹಾಗೂ ಶಾಲೆಗಳು ಮಾತ್ರ ಅವಕಾಶ ಕೊಟ್ಟಿದೆ ಎಂದು ಹೇಳಿದ್ದಾರೆ. ಸಿಖ್ ಧರ್ಮದಲ್ಲಿ, ಪೇಟವನ್ನು ಧರ್ಮಕ್ಕೆ ಅತ್ಯಗತ್ಯವೆಂದು ಪರಿಗಣಿಸಲಾಗಿದೆ ಮತ್ತು ಸ್ವೀಕರಸಲಾಗಿದೆ. ಹಿಜಬ್ ಕುರಿತಾಗಿ ಕುರಾನ್ ನಲ್ಲಿ ಯಾವುದೇ ಉಲ್ಲೇಖ ಈ ರೀತಿಯಾಗಿ ಕಾಣುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇಲ್ಲಿ ಮುಸ್ಲಿಂ ಮಹಿಳೆಯರನ್ನು ತಮ್ಮ ಲಾಭಕ್ಕಾಗಿ ಕೋಮುಪ್ರಚೋದನೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಹಾಗೆಯೇ ಇನ್ನೊಬ್ಬರ ಪ್ರಚೋದನೆಗೆ ಒಳಗಾಗಬೇಡಿ, ವಿದ್ಯಾರ್ಥಿಗಳೇ ನಿಮ್ಮ ಓದಿನ ಕಡೆ ಗಮನ ಕೊಡಿ ಎಂಬ ಸಲಹೆಯನ್ನು ನೀಡಿದ್ದಾರೆ. ರಾಜಕೀಯವಾಗಿ ಮುಸ್ಲಿಂ ಮಹಿಳೆಯರನ್ನು ಇಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Leave A Reply

Your email address will not be published.