ಮಂಗಳೂರು : ನಾಪತ್ತೆಯಾದ ಯುವತಿಯರು ಪತ್ತೆ!

ಮಂಗಳೂರು : ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಜಪೆ ಗ್ರಾಮ ಕೊಂಚಾರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಇಬ್ಬರು ಯುವತಿಯರು ನಾಪತ್ತೆಯಾದ ಪ್ರಕರಣ ಈಗ ಸುಖಾಂತ್ಯ ಕಂಡಿದೆ.

ನಾಪತ್ತೆ ಪ್ರಕರಣವನ್ನು ಬಜ್ಪೆ ಪೊಲೀಸರು ಭೇದಿಸಿದ್ದಾರೆ.

ಮುಬೀನಾ ( 22) ಮತ್ತು ಬುಶ್ರಾ ( 21) ಎಂಬುವರು ಕಳೆದ ದಿನಾಂಕ 07 ರಂದು ರಾತ್ರಿ ಸುಮಾರು‌12.30 ಗಂಟೆಗೆ ಊಟ ಮಾಡಿ ಮನೆಯಲ್ಲಿ ಮಲಗಿದ್ದವರು ನಂತರ ಮುಂಜಾನೆ 2 ಗಂಟೆ ಸುಮಾರಿಗೆ ಮನೆಯವರು ಎದ್ದು ನೋಡಿದಾಗ ನಾಪತ್ತೆಯಾಗಿದ್ದರು.

ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಪತ್ತೆಯಾದ 2 ದಿನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜಾವಗಲ್ ಎಂಬಲ್ಲಿ ಸುರಕ್ಷಿತವಾಗಿ ಪತ್ತೆ ಮಾಡಿದ್ದಾರೆ.

ಬಜಪೆ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ ಜಿ ರವರ ನೇತೃತ್ವದಲ್ಲಿ ಪಿ ಎಸ್ ಐ ರಾಘವೇಂದ್ರ ನಾಯ್ಕ, ಸಿಬ್ಬಂದಿಯವರಾದ ಎ ಎಸ್ ಐ ರಾಮ ಪೂಜಾರಿ, ರಾಮ ನಾಯ್ಕ, ಸಂತೋಷ, ರಶೀದ ಶೇಖ್, ಸುಜನ, ಸಿದ್ದಲಿಂಗಯ್ಯ, ಉಮೇಶ ಕೆ ಮತ್ತು ಅಕ್ಷತಾರವರು ಈ ಪತ್ತೆ ಕಾರ್ಯದಲ್ಲಿ ಇದ್ದರು.

Leave A Reply

Your email address will not be published.