ಭಾರತದ ಮೊತ್ತ ಮೊದಲ ಮತದಾರ ಯಾರೆಂಬುದು ನಿಮಗೆ ಗೊತ್ತೇ?
ಹಿಮಾಚಲ ಪ್ರದೇಶದ ಕಿಂನೌರ್ ಜಿಲ್ಲೆಯ ಕಲ್ಪಾ ಗ್ರಾಮದ ಶ್ಯಾಮ್ ಶರಣ್ ನೇಗಿ ಅವರು ಭಾರತದ ಮೊದಲ ಮತದಾರ ಎಂದು 2007 ರಲ್ಲಿ ಭಾರತೀಯ ಚುನಾವಣಾ ಆಯೋಗವು ಕಂಡು ಹಿಡಿದಿದೆ.
ಭಾರತದ ಸ್ವತಂತ್ರಗೊಂಡ ನಂತರ ನಡೆದ ಮೊದಲ ಚುನಾವಣೆಯು 1952 ರಲ್ಲಿ ನಡೆದಾಗ ಮೊದಲ ಮತ ಚಲಾವಣೆ ಮಾಡಿದ್ದು ನೇಗಿಯವರು.1951 ರ ಸೆಪ್ಟೆಂಬರ್ ತಿಂಗಳಲ್ಲಿ ಹಿಮಪಾತದ ಕಾರಣದಿಂದಾಗಿ ಐದು ತಿಂಗಳ ಮೊದಲೇ ಈ ಮತದಾನ ನಡೆದಿತ್ತು. ನೇಗಿಯವರು ಶಿಕ್ಷಕರು. ಅಷ್ಟು ಮಾತ್ರವಲ್ಲದೇ ಶಿಕ್ಷಕರಾದ ಕಾರಣ ಚುನಾವಣಾ ಕರ್ತವ್ಯಕ್ಕೂ ಹಾಜರಾಗಬೇಕಿತ್ತು. ಹಾಗಾಗಿ ಮೊದಲು ಮತದಾನ ಮಾಡಿ ನಂತರ ಚುನಾವಣೆಗೆ ಹಾಜರಾಗಿದ್ದರು. ಹೀಗಾಗಿ ಮೊತ್ತಮೊದಲ ಮತ ಚಲಾಯಿಸಿದ ವ್ಯಕ್ತಿ ನೇಗಿಯವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1917 ರ ಜುಲೈ 1 ರ ಕಲ್ಪಾ ಗ್ರಾಮದಲ್ಲಿ ನೇಗಿಯವರ ಜನನವಾಯಿತು. ಸರಕಾರಿ ಶಾಲೆಯ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದ್ದಾರೆ. ಇದರ ಜೊತೆಗೆ ಮೊದಲ ಚುನಾವಣೆಗಾಗಿ ಕೆಲಸ ಕೂಡಾ ಮಾಡಿದ್ದಾರೆ. 10 ನೇ ವಯಸ್ಸಿನಲ್ಲಿ ಶಾಲಾ ಶಿಕ್ಷಣ ಪ್ರಾರಂಭಿಸಿದ ನೇಗಿ ಅವರು 10 ನೇ ತರಗತಿ ತಲುಪುವ ವೇಳೆ 20 ವರ್ಷ ತುಂಬಿದ ಕಾರಣಕ್ಕೆ 10 ನೇ ತರಗತಿ ಪ್ರವೇಶಕ್ಕೆ ನಿರಾಕರಣೆ ಮಾಡಿದ್ದಾರೆ.
ಅನಂತರ ಅವರು ಅರಣ್ಯ ಇಲಾಖೆಯಲ್ಲಿ 6 ವರ್ಷಗಳ ಕಾಲ ಗಾರ್ಡ್ ಆಗಿ ಸೇವೆ ಸಲ್ಲಿಸಿದ್ದಾರೆ. ನಂತರ ಜೂನಿಯರ್ ಬೇಸಿಕ್ ಶಿಕ್ಷಕರಾಗಿ ಕಲ್ಪದ ಲೋವರ್ ಮಿಡಲ್ ಸ್ಕೂಲ್ ನಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. 23 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ 1975 ರಲ್ಲಿ ನಿವೃತ್ತಿ ಹೊಂದಿದ್ದಾರೆ.
33 ವರ್ಷಗಳಿದ್ದಾಗ ಅವರು 1951 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಮೊದಲ ಮತ ಚಲಾಯಿಸಿದರು.
ಹಿಮಾಚಲ ಪ್ರದೇಶದ ಕಿಂನೌರ್ ಜಿಲ್ಲೆಯ ಕಲ್ಪಾ ಗ್ರಾಮದ ಶ್ಯಾಮ್ ಶರಣ್ ನೇಗಿ ಅವರು ಭಾರತದ ಮೊದಲ ಮತದಾರ ಎಂದು ಪತ್ತೆ ಮಾಡಿದೆ. 2007 ರಲ್ಲಿ ಭಾರತೀಯ ಚುನಾವಣಾ ಆಯೋಗವು ಕಂಡು ಹಿಡಿದಿದೆ