ಬಿಕಿನಿ ಬೇಕಾದರೆ ಹಾಕ್ಕೊಳ್ಳಿ ಎಂದ ಪ್ರಿಯಾಂಕಾ ಗಾಂಧಿ | ಶಾಲೆಯಲ್ಲಿ ಬಿಕಿನಿ ಹಾಕೊಳ್ಳಕ್ಕೆ ಹೇಳ್ತೀಯಲ್ಲ…ಪ್ರಮೋದ್ ಮುತಾಲಿಕ್ ಆಕ್ರೋಶ
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಧಾರವಾಡದಲ್ಲಿ ಹಿಜಬ್ ಕುರಿತು ಮಾತನಾಡುತ್ತಾ ,” ಹಿಜಬ್ ವಿಚಾರ ಪ್ರಾರಂಭ ಮಾಡಿದ್ದು ಉಡುಪಿಯ ಮುಸ್ಲಿಂ ವಿದ್ಯಾರ್ಥಿನಿಯಿಂದ. ವಿದ್ಯೆಗಿಂತ ಹಿಜಬ್ ಗೆ ಮಹತ್ವ ಕೊಡುತ್ತೇವೆ ಎಂದಿದ್ದರೆ ಇಷ್ಟೊಂದು ಬೆಳವಣಿಗೆ ಆಗುತ್ತಿರಲಿಲ್ಲ. ಕೋರ್ಟ್ ಆದೇಶ ಎಲ್ಲರೂ ಪಾಲಿಸಬೇಕು. ಅದು ನಮ್ಮ ಧರ್ಮ, ಕರ್ತವ್ಯ ಎಂದು ತಿಳಿಸಿದರು.
ಪ್ರಿಯಾಂಕಾ ಗಾಂಧಿ ಮಾಡಿರುವ ಟ್ವೀಟ್ ಬಗ್ಗೆನೂ ಮಾತನಾಡುತ್ತಾ ಅವರು, ಮಹಿಳೆಯರಿಗೆ ಸ್ವತಂತ್ರ ಕೊಡಬೇಕು. ಹಕ್ಕು ಕೊಡಬೇಕು. ಬಿಕಿನಿ ಹಾಕ್ಕೊಬಹುದು, ಜೀನ್ಸ್ ಹಾಕ್ಕೋಬಹುದು ಎಂಬುದನ್ನು ಉಲ್ಲೇಖ ಮಾಡಿದ ಅವರು, ನೀವು ದೊಡ್ಡ ಸ್ಥಾನದಲ್ಲಿ ಇದ್ದೀರಾ ? ಈ ರೀತಿ ಹೇಳಿಕೆ ಕೊಡುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ಇದು ನೀವು ಮಹಿಳೆಯರಿಗೆ ಮಾಡುವಂತಹ ಅವಮಾನ. ಶಾಲಾ ಆವರಣದಲ್ಲಿ ಬಿಕಿನಿ ಹಾಕಿಕೊಳ್ಳಿ ಎಂಬ ಸಂದೇಶವನ್ನು ಕೊಡ್ತೀರಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪಾಕಿಸ್ತಾನ ನಮ್ಮ ದೇಶದ ಹಿಜಬ್ ವಿಷಯದಲ್ಲಿ ಮೂಗು ತೂರಿಸೋ ಅಗತ್ಯವಿಲ್ಲ. ಅದಕ್ಕೆ ಇದರ ಅವಶ್ಯಕತೆ ಇಲ್ಲ. ಭಯೋತ್ಪಾದನೆಯೇ ತುಂಬಿರುವ ದೇಶ ಪಾಕಿಸ್ತಾನ. ಅವರು ಮಹಿಳೆಯರನ್ನು ಮಕ್ಕಳನ್ನು ಹೆರೋ ಮೆಷಿನ್ ತರಹ ನಡೆಸಿಕೊಳ್ತೀರಾ.ಗುಂಡು ಹೊಡೆಯುತ್ತೀರಿ. ನಿಮ್ಮ ಉಪದೇಶದ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಅಲ್ಲಾಹು ಅಕ್ಬರ್ ಎಂದ ಮುಸ್ಲಿಂ ಹುಡುಗಿಗೆ 5 ಲಕ್ಷ ಘೋಷಣೆ ಮಾಡಿ, ಪ್ರಚೋದನೆ ನೀಡಿ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತಲು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ.