ಪಡುಬಿದ್ರಿ : ಯುವತಿ ಆತ್ಮಹತ್ಯೆ | ವಿಪ್ರೋ ಕಂಪನಿ ಉದ್ಯೋಗಿ ಮನೆಯಲ್ಲೇ ಸಾವು |

ಪಡುಬಿದ್ರಿ : ತಂದೆ ತಾಯಿ‌ ಸುರತ್ಕಲ್ ಗೆ ಹೋಗಿದ್ದ ಸಂದರ್ಭ ಮನೆಯಲ್ಲಿ ತಾನು ಕೆಲಸ ಮಾಡಿಕೊಂಡಿದ್ದ ಕೋಣೆಯಲ್ಲೇ ಸೌಜನ್ಯ ( 22) ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

 

ಮಧ್ಯಾಹ್ನದ ವೇಳೆ ಹೆತ್ತವರು ಬಂದಾಗ ಈ ಘಟನೆ ತಿಳಿದು ಬಂದಿದೆ.

ಬ್ರಹ್ಮಸ್ಥಾನ ರಸ್ತೆ ಬಳಿಯ ನಿವಾಸಿಯಾದ ಯುವತಿ ಫೆ.10 ರಂದು ಮನೆಯ ಸೀಲಿಂಗ್ ನ ಕಬ್ಬಿಣದ ಕೊಕ್ಕೆಗೆ ಸೀರೆಯನ್ನು ಹಾಕಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹೈದರಾಬಾದ್ ನ ವಿಪ್ರೋ ಕಂಪನಿಯಲ್ಲಿ ಯುವತಿ ದುಡಿಯುತ್ತಿದ್ದು, ಕೊರೊನಾ ಕಾರಣದಿಂದ ಕಳೆದ 10 ತಿಂಗಳುಗಳಿಂದ ” ವರ್ಕ್ ಫ್ರಂ ಹೋಮ್” ಮಾಡಿಕೊಂಡಿದ್ದಳು.
ಯುವತಿಯ ಅಜ್ಜಿ ಮನೆಯಲ್ಲೇ ಇದ್ದರೂ ಅವರ ಗಮನಕ್ಕೆ ಇದು ಬಂದಿಲ್ಲ.

ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.