ಪೊಲೀಸ್ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ| ರಾಜ್ಯ ಕೈಗಾರಿಕಾ‌ ಭದ್ರತಾ ಪಡೆ SI ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಮಾರ್ಚ್ 03 ಕೊನೆಯ ದಿನಾಂಕ

ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿನ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ( ಕೆ ಎಸ್ ಐ ಎಸ್ಎಫ್) ಪೊಲೀಸ್ ಸಬ್ ಇನ್ಸ್ ಪೆಕ್ಟರ್ ( ಪುರುಷ ಮತ್ತು ಮಹಿಳಾ ಹಾಗೂ ತೃತೀಯ ಲಿಂಗ) ಮತ್ತು ಸೇವಾನಿರತರನ್ನೊಳಗೊಂಡ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ( ವೃಂದ ಮತ್ತು ನೇಮಕಾತಿ) ನಿಯಮಗಳು 2021 ಮತ್ತು ಕರ್ನಾಟಕ ನಾಗರಿಕ ಸೇವೆಗಳು‌( ಸಾಮಾನ್ಯ ನೇಮಕಾತಿ) ನಿಯಮಾವಳಿಗೆ ಅನುಸಾರ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ : ಪೊಲೀಸ್ ಸಬ್ ಇನ್ಸ್ ಪೆಕ್ಟರ್ ( ಕೆಎಸ್ಐಎಸ್ಎಫ್) ( ಪುರುಷ) : 40
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ( ಕೆಎಸ್ಐಎಸ್ಎಫ್) ( ಮಹಿಳಾ) : 12
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ( ಕೆಎಸ್ಐಎಸ್ಎಫ್) ( ಪುರುಷ ) ಸೇವೆಯಲ್ಲಿರುವವರಿಗೆ : 07
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ( ಕೆಎಸ್ಐಎಸ್ಎಫ್) ಮಹಿಳಾ
ಸೇವೆಯಲ್ಲಿರುವವರಿಗೆ : 02
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ( ಕೆಎಸ್ಐಎಸ್ಎಫ್) ತೃತೀಯ ಲಿಂಗ : 02

ಒಟ್ಟು ಉದ್ಯೋಗ : 63

ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ ನಲ್ಲಿ ಆನ್ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿಲ್ಲ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 10-02-2022 ರ ಬೆಳಿಗ್ಗೆ 10 ಗಂಟೆಗೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-03-2022 ಸಂಜೆ 06.00 ಗಂಟೆಗೆ
ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಗಳ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ : 05-03-2022

ಅರ್ಜಿ ಶುಲ್ಕ : ಸಾಮಾನ್ಯ ವರ್ಗ, ಪ್ರವರ್ಗ 2( ಎ), 2 ( ಬಿ), 3 ( ಎ), 3 ( ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ.500/-, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.250/-

ನಿಗದಿತ ಶುಲ್ಕವನ್ನು ನಗದು/ಆನ್ಲೈನ್ ರೂಪದಲ್ಲಿ ಸ್ಥಳೀಯ ಅಂಚೆ ಕಚೇರಿಗಳಲ್ಲಿ ಅಥವಾ ಹೆಚ್ ಡಿ ಎಫ್ ಸಿ ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಿ ನಂತರ ಚಲನ್ ನ ‘ ಅಭ್ಯರ್ಥಿ ಪ್ರತಿ’ ಇಟ್ಟುಕೊಂಡಿರತಕ್ಕದ್ದು.

ಯಾರೆಲ್ಲ ಅರ್ಜಿ ಸಲ್ಲಿಸಬಹುದು : ಪುರುಷ, ಮಹಿಳಾ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ವಯೋಮಿತಿ : ಸಾಮಾನ್ಯ ಅಭ್ಯರ್ಥಿಗಳಿಗೆ:
ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 03-03-2022 ಕ್ಕೆ ಪುರುಷ, ಮಹಿಳಾ ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಈ ಕೆಳಕಂಡ ವಯಸ್ಸು ಮೀರಿರಬಾರದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 28 ವರ್ಷಗಳು. ಇತರೆ ಅಭ್ಯರ್ಥಿಗಳಿಗೆ 26 ವರ್ಷಗಳು.

ಸೇವಾನಿರತ ಅಭ್ಯರ್ಥಿಗಳಿಗೆ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷ ಗಳು. ಇತರೆ ಅಭ್ಯರ್ಥಿಗಳಿಗೆ 35 ವರ್ಷಗಳು ವಿದ್ಯಾರ್ಹತೆ : ಯುಜಿಸಿಯಿಂದ ಮಾನ್ಯತೆ ಪಡೆದಿರುವ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಅಂದರೆ 03-03-2022 ಕ್ಕೆ ಹೊಂದಿರಬೇಕು.

ವೇತನ ಶ್ರೇಣಿ : ₹ 37900-950-39800-1100-46400-1250-53900-1450-65600-1650-70850

ಅರ್ಜಿ ಸಲ್ಲಿಸುವುದು ಹೇಗೆ ?

ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ ವಿಳಾಸಕ್ಕೆ ಭೇಟಿ ನೀಡಿ, ನಂತರ ಓಪನ್ ಆದ ಹೋಮ್ ಪೇಜ್ ನಲ್ಲಿ ‘ NEW APPLICATION’ ಕ್ಲಿಕ್ ಮಾಡಿ, ನಂತರ ಸೂಚನೆಗಳನ್ನು ಓದಿಕೊಂಡು ಅಗತ್ಯ ಮಾಹಿತಿಗಳನ್ನು ನೀಡುವ ಮೂಲಕ ಅಪ್ಲಿಕೇಶನ್ ಪೂರ್ಣಗೊಳಿಸಿ. ಅರ್ಜಿ ಪೂರ್ಣಗೊಳಿಸಿದ ನಂತರ ಪ್ರಿಂಟ್ ತೆಗೆದುಕೊಂಡು ಮುಂದಿನ ರೆಫರೆನ್ಸ್ ಗಾಗಿ ಇಟ್ಟುಕೊಳ್ಳಿ.

Leave A Reply

Your email address will not be published.