ದೇವರ ಕಾರ್ಯಕ್ರಮದಲ್ಲಿ ನಂಗಾ ನಾಚ್!!! ಡ್ಯಾನ್ಸ್ ಮಾಡಿದ ಗ್ರಾ.ಪಂ ಅಧ್ಯಕ್ಷ ಮತ್ತು ಸದಸ್ಯನ ಮೇಲೆ ಕೇಸು

ದೇವರ ಕಾರ್ಯಕ್ರಮವೊಂದರಲ್ಲಿ ನಂಗಾ ನಾಚ್ ಮಾಡಿದ ಗ್ರಾ.ಪಂ ಅಧ್ಯಕ್ಷ ಮತ್ತು ಸದಸ್ಯನ ವಿರುದ್ಧ ಕೇಸು ದಾಖಲಾಗಿದೆ.

 

ಕೆಜಿಎಫ್ ತಾಲೂಕಿನ ಶ್ರೀನಿವಾಸಸಂದ್ರ ಗ್ರಾ ಪಂ ವ್ಯಾಪ್ತಿಯ ಮೇಲುಪಲ್ಲಿಯಲ್ಲಿ ನಡೆದ ಗಂಗಮಾಂಬಾ ಜಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಫೆ. 8 ರಂದು ರೆಕಾರ್ಡ್ ಡ್ಯಾನ್ಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು‌. ವೇದಿಕೆಯಲ್ಲಿ ನರ್ತಕಿಯರ ಜೊತೆ ಜನಪ್ರತಿನಿಧಿಗಳು ಕೂಡಾ ಕುಣಿದುಕುಪ್ಪಳಿಸಿದ್ದಾರೆ.

ನರ್ತಕಿಯರ ಜೊತೆ ಕುಣಿದು ಕುಪ್ಪಳಿಸಿದ್ದ ಗ್ರಾಪಂ ಅಧ್ಯಕ್ಷ ರಘು ಮತ್ತು ಸದಸ್ಯ ರಾಜಣ್ಣ ವಿರುದ್ಧ ಕ್ಯಾಸಂಬಳ್ಳಿ ಠಾಣೆಯಲ್ಲಿ ಸಾಂಕ್ರಾಮಿಕ ಕಾಯಿಲೆ ಕಾಯ್ದೆಯಡಿ ದೂರು ದಾಖಲು ಮಾಡಲಾಗಿದೆ.

ದೇವಿ ಜಾತ್ರೆ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಪಲಮನೇರ್ ನಿಂದ ಯುವತಿಯರನ್ನು ಕರೆಸಿ ಸಾರ್ವಜನಿಕವಾಗಿ ಡ್ಯಾನ್ಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

Leave A Reply

Your email address will not be published.