ಅಂಕತ್ತಡ್ಕ ಶಾಲೆಯಲ್ಲಿ ಶುಕ್ರವಾರ ನಮಾಝ್ ಮಾಡಿದ ವಿದ್ಯಾರ್ಥಿಗಳು,ವಿಡಿಯೋ ವೈರಲ್

ಸವಣೂರು:ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಸರಕಾರಿ ಶಾಲೆಯೊಂದರ ಕೊಠಡಿಯೊಂದರಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ನಮಾಝ್ ಮಾಡಲು ಅವಕಾಶ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದ್ದು ,ಇದಕ್ಕೆ ಸಂಬಂಧಿಸಿದ ವೀಡಿಯೋ ಒಂದು ಹರಿದಾಡುತ್ತಿದೆ.

ಸವಣೂರು ಗ್ರಾ.ಪಂ ವ್ಯಾಪ್ತಿಯ ಪಾಲ್ತಾಡಿ ಅಂಕತ್ತಡ ಶಾಲೆಯಲ್ಲಿ ಸಾಮೂಹಿಕವಾಗಿ ನಮಾಝ್ ಮಾಡಿದ್ದು ಈ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಶಾಲಾ ಮುಖ್ಯಸ್ಥರಿಗೆ ಈ ವಿಚಾರವನ್ನು ಈ ಹಿಂದೆಯೂ ಗಮನಕ್ಕೂ ತರಲಾಗಿದ್ದರೂ ಮತ್ತೆ ಮುಂದುವರಿಕೆಯಾಗಿದೆ ಎನ್ನಲಾಗಿದೆ.

ಹೆತ್ತರವರು ಪೋಷಕರ ಸಭೆಯಲ್ಲಿ ಪ್ರಸ್ತಾಪ ಮಡಿದ್ದರು. ಹೀಗಾಗಿ ಶಿಕ್ಷಕರು ಮಕ್ಕಳನ್ನು ಹೆತ್ತವರು ಕರೆದುಕೊಂಡು ಹೋಗಿ ವಾಪಾಸು ಶಾಲೆಗೆ ಬಿಡುವಂತೆ ಶಾಲಾ ಮುಖ್ಯಸ್ಥರು ತಿಳಿಸಿದ್ದರು ಎನ್ನಲಾಗಿದೆ. ಆದರೆ ಮಕ್ಕಳ ಹೆತ್ತವರು ಕರೆದುಕೊಂಡು ಹೋಗಲು ಬಾರದ ಹಿನ್ನೆಲೆಯಲ್ಲಿ ಶುಕ್ರವಾರದಂದು ಶಾಲೆಯ ಕೊಠಡಿಯೊಂದರಲ್ಲಿಯೇ ನಮಾಝ್ ಮಾಡಲು ಮುಂದಾಗಿದ್ದಾರೆ.

ಇದಕ್ಕೆ ಸಂಬಂಧಿಸಿದ ವೀಡಿಯೋ ಹರಿದಾಡುತ್ತಿದ್ದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ರವಾನೆಯಾಗಿದ್ದು ಶಾಲೆಯತ್ತ ಅಧಿಕಾರಿಗಳು ದೌಡಾಯಿಸಿದ್ದಾರೆ. ಬೆಳ್ಳಾರೆ ಪೊಲೀಸರು ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.

Leave A Reply

Your email address will not be published.