ಯುವತಿಯೊಬ್ಬಳಿಗೆ ವೆಬ್ ಸಿರೀಸ್ ನಲ್ಲಿ ನಟಿಸಲು ಕಾಟ| ಯುವತಿ ದೂರಿನ ಮೇರೆಗೆ ನಕಲಿ ಡೈರಕ್ಟರ್ ಬಂಧನ

ಬೆಂಗಳೂರು : ಯುವತಿಯೋರ್ವಳನ್ನು ವೆಬ್ ಸಿರೀಸ್ ಹೀರೋಯಿನ್ ಆಗುವಂತೆ ಒತ್ತಾಯಿಸುತ್ತಿದ್ದ ನಕಲಿ ಡೈರೆಕ್ಟರ್ ನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮನೀಶ್ ಬಂಧಿತ ಆರೋಪಿ. ನಾನು ವೆಬ್ ಸಿರೀಸ್ ಡೈರೆಕ್ಟರ್ ಎಂದು ಪರಿಚಯ ಮಾಡಿಕೊಂಡು ತನ್ನ ನಿರ್ದೇಶನದ ವೆಬ್ ಸಿರೀಸ್ ನಲ್ಲಿ ನಟಿಸುವಂತೆ ಒತ್ತಾಯಿಸಿ ತನ್ನದೇ ಏರಿಯಾದ ಯುವತಿಯೋರ್ವಳ ಹಿಂದೆ ಬಿದ್ದಿದ್ದ‌ ಈತ. ಪ್ರತಿ ದಿನ ಯುವತಿಗೆ ಟಾರ್ಚರ್ ಕೊಡುತ್ತಿದ್ದ.

ಈತನ ಕಾಟದಿಂದ ಬೇಸತ್ತ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಯುವತಿ ದೂರು ಆಧರಿಸಿ ಇದೀಗ ಪೊಲೀಸರು ಆರೋಪಿ ಮನೀಶ್ ನನ್ನು ಬಂಧಿಸಿದ್ದಾರೆ.

Leave A Reply

Your email address will not be published.