ಪಾಲಕರು ಹೊರಗಡೆ ಹೋಗಿದ್ದಾಗ ಮನೆಯಲ್ಲಿ ನಡೆಯಿತು ಘೋರ ದುರಂತ| 19 ವರ್ಷದ ಯುವತಿಯ ಮೃತದೇಹ ಮನೆ ಆವರಣದ ಬಾವಿಯಲ್ಲಿ ಪತ್ತೆ| ಮಗಳ ಸ್ಥಿತಿ ಕಂಡು ಕುಸಿದು ಬಿದ್ದ ಪೋಷಕರು

Share the Article

19 ವರ್ಷದ ಯುವತಿಯೊಬ್ಬಳು ತನ್ನ ಮನೆಯ ಆವರಣದಲ್ಲಿರುವ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ತ್ರಿಶೂರ್ ನಲ್ಲಿ ನಡೆದಿದೆ. ಮೃತ ಯುವತಿಯನ್ನು ಶಾಂತವನ(19) ಎಂದು ಗುರುತಿಸಲಾಗಿದೆ. ಈಕೆ ಇರಿಂಜಲಕುಡ ಮೂಲದ ನಿವಾಸಿ.

ಗುರುವಾರ 11.30 ರ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಕೊಡುಂಗಲ್ಲೂರಿನ ಕೆಕೆಟಿಎಂ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿಪೂರ್ವ ವಿದ್ಯಾರ್ಥಿನಿಯಾಗಿದ್ದ ಈಕೆ ಪಾಲಕರು ಹೊರಗಡೆ ಹೋಗಿದ್ದಾಗ ಈ ಘಟನೆ ನಡೆದಿದೆ.

ಜ್ಯೋತಿ ಪ್ರಕಾಶ್ ಮತ್ತು ರಜಿತಾ ದಂಪತಿಯ ಪುತ್ರಿ ಮೃತ ಯುವತಿ. ಆಕೆಯ ಮೃತದೇಹವನ್ನು ಇರಿಂಜಲಕುಡದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಾಂತರಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ತ್ರಿಶೂರ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಈ ಸಂಬಂಧ ಕಟ್ಟೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ.

Leave A Reply