ಸ್ನಾನಕ್ಕೆ ಹೋದ ನವವಿವಾಹಿತೆ ಸ್ನಾನಗೃಹದಲ್ಲೇ ಶವವಾಗಿ ಪತ್ತೆ | ಮದುವೆಯಾದ ಮೂರೇ ದಿನಕ್ಕೆ ನವವಿವಾಹಿತೆ ಗ್ಯಾಸ್ ಗೀಸರ್ ಅನಿಲ ಸೋರಿಕೆಗೆ ಬಲಿ
ಸ್ನಾನಕ್ಕೆಂದು ಗ್ಯಾಸ್ ಗೀಸರ್ ಯಾರಾದರೂ ಬಳಸುತ್ತಿದ್ದರೆ ತುಂಬಾ ಜಾಗೂರಕರಾಗಿ ಇರುವುದು ಒಳ್ಳೆಯದು. ಏಕೆಂದರೆ ಈ ಗ್ಯಾಸ್ ಗೀಸರ್ ಸೋರಿಕೆಯಿಂದ ತಾಯಿ, ಮಗು ಮೃತಪಟ್ಟಿರುವ ಘಟನೆ ಕೆಲ ತಿಂಗಳ ಹಿಂದೆ ಹಾಗೂ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿತ್ತು.
ಈಗ ಇದರ ಬೆನ್ನಲ್ಲೇ ನವವಿವಾಹಿತೆಯೊಬ್ಬಳು ಪ್ರಾ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಫಿರೋಜಾಬಾದ್ ನಲ್ಲಿ ನಡೆದಿದೆ.
27 ವರ್ಷದ ನಿಧಿ ಗುಪ್ತಾ ಬ್ಯಾಂಕ್ ಉದ್ಯೋಗಿಯಾಗಿದ್ದು, ಇತ್ತೀಚೆಗಷ್ಟೇ ವಿವಾಹವಾಗಿದ್ದರು ಈಗ ಮದುವೆಯಾಗಿ ಮೂರೇ ದಿನಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.
ಬಳೆ ಉದ್ಯಮಿ ನಿಶ್ಚಲ್ ಗುಪ್ತಾ ಎಂಬುವವರನ್ನು ಮೂರು ದಿನಗಳ ಹಿಂದೆ ಮದುವೆಯಾಗಿದ್ದ ನಿಧಿ ಗ್ಯಾಸ್ ಗೀಜರ್ ಗೆ ಮೃತರಾಗಿದ್ದಾರೆ.
ಹೊಸದಾಗಿ ಮದುವೆ ಆಗಿ ಬಂದಿದ್ದ ನಿಧಿ ಸ್ನಾನ ಮಾಡಲೆಂದು ಬಾತ್ ರೂಮಿಗೆ ಹೋಗಿದ್ದಾರೆ. ಬಾತ್ ರೂಮಿನಲ್ಲಿದ್ದ ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆ ಆಗುತ್ತಿತ್ತು. ಇದನ್ನು ಗಮನಿಸದೇ ನಿಧಿ ಬಾತ್ ರೂಂ ಒಳಗೆ ಹೋಗಿ ಬಾಗಿಲು ಹಾಕಿ ಬಿಟ್ಟಿದ್ದಾರೆ. ಅಲ್ಲಿಗೆ ಉಸಿರು ಎಳೆದುಕೊಂಡದ್ದೇ ಉಸಿರೇ ಕಟ್ಟಿದೆ. ಜೋರಾಗಿ ಕಿರುಚಾಡಿದ ಅವರು ಬಾಗಿಲು ಬಡಿದಿದ್ದಾರೆ. ಆದರೆ ಅದು ಹೊರಗಿನವರಿಗೆ ತಿಳಿಯಲಿಲ್ಲ. ಮದುವೆ ಮನೆಯಾದ್ದರಿಂದ ನೆಂಟರಿಷ್ಟರು ತುಂಬಿಕೊಂಡಿದ್ದರು. ಮನೆಯಲ್ಲಿ ಗಲಾಟೆ ಜೋರಾಗಿತ್ತು. ನಿಧಿ ಉಸಿರುಗಟ್ಟಿದಾಗ ಬಾಗಿಲಿನ ಚಿಲಕ ತೆಗೆಯೋ ಪ್ರಯತ್ನ ಮಾಡಿದ್ದಾರೆ ಆದರೆ ಆಗಲಿಲ್ಲ.
ತುಂಬಾ ಹೊತ್ತು ಕಳೆದ ಮೇಲೂ ನಿಧಿ ಬಾತ್ ರೂಂ ನಿಂದ ವಾಪಸ್ ಬರದೇ ಇದ್ದುದ್ದನ್ನು ಗಮನಿಸಿ ಬಾಗಿಲು ಬಡಿದಾಗ ಬಾಗಿಲು ತೆಗೆಯದೇ ಇದ್ದುದ್ದನ್ನು ಗಮನಿಸಿ ಬಾಗಿಲು ಒಡೆದು ನೋಡಿದಾಗ ನಿಧಿ ಅಲ್ಲೇ ಶವವಾಗಿ ಬಿದ್ದಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.