ಬೆಳ್ತಂಗಡಿ: ಬಸ್ ನಿಲ್ದಾಣದ ಬಳಿಯ ಎರಡು ಅಂಗಡಿಗಳಿಗೆ ನುಗ್ಗಿದ ಕಳ್ಳರು | ನಗದು ಸೇರಿದಂತೆ ಅಪಾರ ಮೌಲ್ಯದ ಚಿನ್ನಾಭರಣ ಕಳವು

Share the Article

ಬೆಳ್ತಂಗಡಿ: ಬಸ್ ನಿಲ್ದಾಣದ ಬಳಿಯ ಎರಡು ಅಂಗಡಿಗಳ ಶಟರಿನ ಬೀಗವನ್ನು ಮುರಿದು ಈ ಕಳ್ಳತನ ಮಾಡಿರುವ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ.

ಸೀತಾರಾಮ ಭೈರ ಎಂಬವರ ಗೂಡಂಗಡಿ ಹಾಗೂ ಪ್ರಶಾಂತ ಆಚಾರ್ಯ ಎಂಬವರ ಗೋಲ್ಡನ್ ಜುವೆಲ್ಲರ್ಸ್ ವರ್ಕ್ಸ್‌ನ ಬೀಗವನ್ನು ಮುರಿದು, ಒಳನುಗ್ಗಿದ್ದಾರೆ.

ಗೂಡಂಗಡಿಯಿಂದ ನಗದು ಸಹಿತ ರೂ.15ಸಾವಿರ ಮೌಲ್ಯದ ಸಿಗರೇಟು, ಜುವೆಲ್ಸ್ ಅಂಗಡಿಯಿಂದ ಬೆಳ್ಳಿ ಆಭರಣ ಹಾಗೂ ರಿಪೇರಿಗೆ ಬಂದ ಚಿನ್ನಾಭರಣ ಸೇರಿ ರೂ.50 ಸಾವಿರಕ್ಕೂ ಮಿಕ್ಕಿ ಸೊತ್ತುಗಳನ್ನು ಕಳ್ಳತನ ನಡೆಸಿದ್ದಾರೆ.

Leave A Reply