ಓನ್ಲೈನ್ ಲಿಂಕ್ ಮೂಲಕ ಹಣ ಕಳೆದುಕೊಂಡ ಮಂಗಳೂರಿನ ವ್ಯಕ್ತಿ | ಮಾತಲ್ಲೇ ಮೋಡಿ ಮಾಡಿ, ಬ್ಯಾಂಕ್ ಖಾತೆಯ ಹಣ ಎಗರಿಸಿದ ಚಾಲಾಕಿ ಮಾತುಗಾರ!!!

ಮಂಗಳೂರು : ನಗರದ ಮರೋಳಿಯ ಬ್ಯಾಂಕ್ ವೊಂದರಲ್ಲಿ ಖಾತೆ ಹೊಂದಿದ ವ್ಯಕ್ತಿಯೊಬ್ಬರು ಆನ್ಲೈನ್ ನಲ್ಲಿ ವಸ್ತುವೊಂದನ್ನು ಆರ್ಡರ್ ಮಾಡಲು ಹೋಗಿ 45,000 ರೂ. ಕಳೆದುಕೊಂಡ ಘಟನೆ ನಡೆದಿದೆ.

ವ್ಯಕ್ತಿಯೊಬ್ಬರು ಸ್ನ್ಯಾಪ್ ಡೀಲ್ ಆನ್ಲೈನ್ ಆ್ಯಪ್ ನಲ್ಲಿ ಟೀ ಕಪ್ ಒಂದನ್ನು ಆರ್ಡರ್ ಮಾಡಿದ್ದರು. ಫೆ.8 ರಂದು ಅಪರಿಚಿತ ವ್ಯಕ್ತಿಯೋರ್ವನು (8327710873) ಕರೆಮಾಡಿ ಮೊಬೈಲ್ ಗೆ ಲಿಂಕ್ ಕಳುಹಿಸಿ ವಿಶ್ವಾಸ ಬರುವಂತೆ ಮಾತನಾಡಿ, ಎರಡು ಲಿಂಕ್ ಗಳನ್ನು ಕಳುಹಿಸಿ ಕರೆಯನ್ನು ಹೋಲ್ಡ್ ನಲ್ಲಿಟ್ಟು ಲಿಂಕ್ ಗಳ ಮೂಲಕ ಡೆಬಿಟ್ ಕಾರ್ಡ್ ನಂಬರ್, ಸಿವಿವಿ ನಂಬರ್ ಮತ್ತು ಒಟಿಪಿ ವಿವರಗಳನ್ನು ಪಡೆದುಕೊಂಡಿದ್ದಾನೆ.

ಟೀ ಕಪ್ ಆರ್ಡರ್ ಮಾಡಿದ ಹಿನ್ನೆಲೆಯಲ್ಲಿ ಈ ಕರೆ ಬಂದಿರಬಹುದು ಎಂದು ಅಂದಾಜಿಸಿ ವ್ಯಕ್ತಿಯು ಎಲ್ಲಾ ವಿವರಗಳನ್ನು ನೀಡಿದ್ದಾರೆ. ಈ ಸಮಯದಲ್ಲಿ ಅವರ ಖಾತೆಯಿಂದ ಹಂತಹಂತವಾಗಿ ಹಣ ಖಾಲಿಯಾಗಿದೆ. ರೂ.45,000/- ಹಣ ಮೋಸದಿಂದ ವರ್ಗಾಯಿಸಲಾಗಿದೆ.

ಪ್ರಕರಣ ಸೆನ್ ಅಪರಾಧ ಠಾಣೆಯಲ್ಲಿ ದಾಖಲಾಗಿದೆ.

Leave A Reply

Your email address will not be published.