82 ವರ್ಷದ ವೃದ್ಧನಿಂದ 78ರ ವೃದ್ದೆಯ ಮೇಲೆ ವರದಕ್ಷಿಣೆ ಕಿರುಕುಳ

78ವರ್ಷದ ವೃದ್ಧೆಯೊಬ್ಬಳಿಗೆ 82ರ ಜತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

 

ಉತ್ತರ ಪ್ರದೇಶದ ಕಾನ್ಸುರದ ಚಕೇರಿ ಪ್ರದೇಶದಲ್ಲಿ ವೃದ್ಧ ಪತಿ ಪತ್ನಿಗೆ ಕಿರುಕುಳ ನೀಡುತ್ತಿದ್ದಾರೆ. ಸಂತ್ರಸ್ತ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಆಕೆಯ ದೂರಿನ ಮೇರೆಗೆ ಪೊಲೀಸರು ವೃದ್ಧೆಯ ಪತಿ ಗಣೇಶ್ ನರೇನ್ ಶುಕ್ಲಾ ಮತ್ತು ಅವರ ಅಳಿಯ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವೃದ್ಧೆಯ ದೂರಿನ ಪ್ರಕಾರ, ಪತಿ ವರದಕ್ಷಿಣೆ ವಿಚಾರವಾಗಿ ನೀಡುತ್ತಿದ್ದ ಎಂದು ಹೇಳಲಾಗಿದೆ. ಪತಿಯ ಕಿರುಕುಳ ಕಾಟ ತಾಳದ ವೃದ್ಧೆ ಪೊಲೀಸ್ ಠಾಣೆಯ ಹೋಗಿದ್ದಾರೆ.

ಪತಿ ನರೇನ್ ಶುಕ್ಲಾ ಆತನ ಆಳೆಯ ಸೇರಿದಂತೆ ಒಟ್ಟು ಆರು ಜನರ ಮೇಲೆ ಕೇಸ್ ದಾಖಲಿಸಿದ್ದಾರೆ. ವೃದ್ಧ ದಂಪತಿಯ ಪುತ್ರ ರಜನೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ತನ್ನ ತಾಯಿ ಎಲ್ಲಾ ಕುಟುಂಬ ಸದಸ್ಯರೊಂದಿಗೆ ಚೆನ್ನಾಗಿ ವರ್ತಿಸುತ್ತಾಳೆ. ಆದರೆ ಕೆಲವು ಸಂಬಂಧಿಕರ ಪ್ರಭಾವದಿಂದ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.

Leave A Reply

Your email address will not be published.