ಬೆಳ್ತಂಗಡಿ:ಬಸ್ಸು ಹಾಗೂ ಬೈಕ್ ನಡುವೆ ಅಪಘಾತ|ಓರ್ವನಿಗೆ ಗಂಭೀರ ಗಾಯ

ಬೆಳ್ತಂಗಡಿ :ಬಸ್ಸು ಹಾಗೂ ಬೈಕ್ ನಡುವೆ ಅಪಘಾತ ನಡೆದಿದ್ದು,ಓರ್ವನಿಗೆ ಗಂಭೀರ ಗಾಯಗಳಾದ ಘಟನೆ ಬದ್ಯಾರು ಸಮೀಪ ಸಂಭವಿಸಿದೆ.

 

ಗಾಯಾಳುಗಳನ್ನು ಬದ್ಯಾರು ಸಮೀಪದ ನಿವಾಸಿ ಪ್ರಶಾಂತ್ ಮತ್ತು ಗುರುವಾರಯಣಕೆರೆಯ ಸಂಪತ್ ಎಂದು ತಿಳಿದುಬಂದಿದೆ.

ಸಂಪತ್ ಎಂಬುವವರ ಕಾಲಿಗೆ ತೀವ್ರವಾದ ಗಾಯ ಆಗಿದ್ದು ಇವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.ಪ್ರಶಾಂತ್ ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕರೆತರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Leave A Reply

Your email address will not be published.