ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಪಾರ್ಥೀವ ಶರೀರದ ಮೇಲೆ ಉಗುಳಿದ ಶಾರುಖ್ ಖಾನ್|ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿಗರು|ಆದರೆ ವಾಸ್ತವತೆ ಏನು ?

Share the Article

ಬಹುಅಂಗಾಂಗ ವೈಫಲ್ಯದಿಂದ ನಿನ್ನೆ ನಿಧನರಾದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ನಟ ಶಾರೂಖ್ ಖಾನ್ ಬಂದಿದ್ದರು. ಅಂತಿಮ ನಮನ ಸಲ್ಲಿಸುವ ವೇಳೆಯಲ್ಲಿ ನಟ ಶಾರೂಖ್ ಒಂದೆರಡು ಕ್ಷಣ ಮಾಸ್ಕ್ ತೆಗೆದು ಪಾರ್ಥೀವ ಶರೀರದ ಮೇಲೆ ಉಗುಳಿದಂತೆ ಕಂಡ ವೀಡಿಯೋ ವೈರಲ್ ಆಗಿತ್ತು.

ಈ ವೀಡಿಯೋ ಗೆ ಹಲವಾರು ಮಂದಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರು. ಟ್ವಿಟ್ಟರ್ ನಲ್ಲಿ ಟೀಕೆಗಳು ವ್ಯಕ್ತವಾದವು. ಲತಾ ಮಂಗೇಶ್ಕರ್ ಅವರ ಮೃತದೇಹದ ಮೇಲೆ ಶಾರೂಖ್ ಖಾನ್ ಉಗುಳುವ ಮೂಲಕ ಅವಮಾನ ಮಾಡಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಇಸ್ಲಾಂನಲ್ಲಿ ಹೀಗೆ ಉಗುಳುವುದು ವಿಶೇಷ ಅರ್ಥವನ್ನು ಹೊಂದಿದೆ ಎಂದಿ ಹಲವು ಮಂದಿಯ ಅಭಿಪ್ರಾಯ. ಯಾರಾದರೂ ಮೃತರಾದಾಗ ಅವರಿಂದ ದುಷ್ಟಶಕ್ತಿ ಅಥವಾ ಸೈತಾನ ನನ್ನು ದೂರವಿಡಲು ಇಸ್ಲಾಂನಲ್ಲಿ ಹೀಗೆ ಉಗುಳುವ ಸಂಪ್ರದಾಯವಿದೆ.

ಆದರೆ ಇಲ್ಲಿ ಉಗುಳಿರುವುದಲ್ಲ ಊದಿರುವುದು. ಇಸ್ಲಾಂನಲ್ಲಿ ಹೀಗೆ ಊದುವುದು ವಿಶೇಷ ಅರ್ಥವನ್ನು ಹೊಂದಿದೆ. ಶಾರೂಖ್ ಖಾನ್ ಲತಾ ಅವರ ಪಾರ್ಥೀವ ಶರೀರದ ಮೇಲೆ ಉಗಳಲಿಲ್ಲ ಬದಲಿಗೆ ಗಾಳಿಯನ್ನು ಊದಿದ್ದಾರೆ. ಇದು ಪರಲೋಕದಲ್ಲಿ ಶಾಂತಿ ಸಿಗಲು ಊದುವುದು ಎಂಬರ್ಥ ಒಳಗೊಂಡಿದೆ.

Leave A Reply