ಭಾರತೀಯ ಮಾರುಕಟ್ಟೆಯಲ್ಲಿ ಖಡಕ್ ಪೈಪೋಟಿ ನೀಡಲು ಸಜ್ಜಾಗುತ್ತಿವೆ ರಾಯಲ್ ಎನ್‌ಫೀಲ್ಡ್‌ನ 4 ಬೈಕ್ ಗಳು!! | ಈ ವಿಭಿನ್ನ ಶೈಲಿಯ ಬೈಕ್ ಗಳ ಕುರಿತು ಇಲ್ಲಿದೆ ಮಾಹಿತಿ

ಭಾರತದಲ್ಲಿ ಅದೆಷ್ಟೋ ಮಂದಿಗೆ ಬೈಕ್ ಕ್ರೇಜ್ ಇದೆ. ಹೊಸ ಮಾದರಿಯ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಎಂಬ ಸುದ್ದಿ ಬಂದರೆ ಸಾಕು ಬುಕ್ ಮಾಡಲು ಕ್ಯೂನಲ್ಲಿ ನಿಲ್ಲುತ್ತಾರೆ. ಅಂತೆಯೇ ಇದೀಗ ರಾಯಲ್ ಎನ್‌ಫೀಲ್ಡ್ ಕಂಪನಿ 2022 ರಲ್ಲಿ ಭಾರತೀಯ ಆಟೋ ಮಾರುಕಟ್ಟೆಯ ತಾಪಮಾನ ಹೆಚ್ಚಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

 

ಹೌದು, ಈ ವರ್ಷ ಕಂಪನಿ ಭಾರತೀಯ ಮಾರುಕಟ್ಟೆಗೆ ನಾಲ್ಕು ಹೊಸ ಬೈಕ್ ಗಳನ್ನು ಬಿಡುಗಡೆ ಮಾಡಲಿದೆ. ಇವುಗಳಲ್ಲಿ ಹೊಸ ತಲೆಮಾರಿನ ರಾಯಲ್ ಎನ್‌ಫೀಲ್ಡ್ ಬುಲೆಟ್ 350, ಕ್ಲಾಸಿಕ್ ಬಾಬರ್ 350, ಹಂಟರ್ 350, ಹಾಗೂ ರಾಯಲ್ ಎನ್‌ಫೀಲ್ಡ್ 411 (Royal Enfield Scram) ಶಾಮೀಲಾಗಿವೆ.

ಭಾರತೀಯ ಮಾರುಕಟ್ಟೆಯಿಂದ ಹಿಡಿದು ವಿದೇಶಿ ಮಾರುಕಟ್ಟೆಗಳಲ್ಲಿಯೂ ಕೂಡ ಕಂಪನಿ ಸಾಕಷ್ಟು ಹಿಡಿತ ಸಾಧಿಸಿದೆ. ಹೀಗಾಗಿ ಈ ಹೊಸ ಬೈಕ್ ಗಳ ಬಿಡುಗಡೆಯ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿ ಪೈಪೋಟಿ ಇತರ ಕಂಪನಿಗಳಿಗೆ ಸುಲಭದ ಮಾತಲ್ಲ ಎಂದೇ ಹೇಳಲಾಗುತ್ತಿದೆ. ಕಳೆದ ಸಾಕಷ್ಟು ಸಮಯದಿಂದ ಕಂಪನಿ ಹಲವು ಹೆಸರುಗಳಿಗೆ ತನ್ನ ಟ್ರೇಡ್ ಮಾರ್ಕ್ ನೀಡಿದೆ. ಇವೆ ಹೆಸರುಗಳನ್ನು ಕಂಪನಿ ತನ್ನ ಮುಂಬರುವ ಬೈಕ್ ಗಳಿಗೆ ಬಳಸುವುದಾಗಿ ಹೇಳಿದೆ.

ರಾಯಲ್ ಎನ್‌ಫೀಲ್ಡ್ ಹಂಟರ್ 350 (Royal Enfield Hunter)

ಚೆನ್ನೈ ಮೂಲದ ಬೈಕ್ ತಯಾರಕ ಸಂಸ್ಥೆಯು ಹಂಟರ್ 350 ಅನ್ನು 2022 ರಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದನ್ನು ಇತ್ತೀಚೆಗೆ ಪರೀಕ್ಷೆಯ ವೇಳೆ ಗಮನಿಸಲಾಗಿದೆ ಮತ್ತು ಶೀಘ್ರದಲ್ಲೇ ಭಾರತಕ್ಕೆ ಬರಲಿದೆ. ಈ ಮೋಟಾರ್‌ ಸೈಕಲನ್ನು ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ರ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಆದರೆ ಅದರ ಸ್ಟೈಲ್ ಮತ್ತು ವಿನ್ಯಾಸವು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಆದರೆ, ಹೊಸ ಮೋಟಾರ್‌ಸೈಕಲ್ ಟ್ರಿಪ್ಪರ್ ನ್ಯಾವಿಗೇಶನ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ, ಇದನ್ನು ಮೇಟಿಯೋರ್ ನೊಂದಿದೆ ಒದಗಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ 350 (Royal Enfield Bullet 350)

ರಾಯಲ್ ಎನ್‌ಫೀಲ್ಡ್ ಹೊಸ ತಲೆಮಾರಿನ ಬುಲೆಟ್ 350 ಯನ್ನು ಮುಂದಿನ ವರ್ಷವೇ ದೇಶದಲ್ಲಿ ಬಿಡುಗಡೆ ಮಾಡಲಿದೆ ಮತ್ತು ಹೊಸ ಕ್ಲಾಸಿಕ್ 350 ನೊಂದಿಗೆ ಒದಗಿಸಲಾದ ಪ್ಲಾಟ್‌ಫಾರ್ಮ್‌ನಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಪ್ರಸ್ತುತ ಮಾದರಿಗೆ ಹೋಲಿಸಿದರೆ ಹೊಸ ತಲೆಮಾರಿನ ಮೋಟಾರ್‌ ಸೈಕಲ್‌ನ ಸ್ಟೈಲ್ ಮತ್ತು ವಿನ್ಯಾಸವು ಗಮನಾರ್ಹವಾಗಿ ಬದಲಾಗಲಿದೆ. ಬೈಕ್ ನಲ್ಲಿ ತಾಂತ್ರಿಕ ಸುಧಾರಣೆಯಾಗುವ ಸಾಧ್ಯತೆಯೂ ಇದೆ. ಹೊಸ ಬುಲೆಟ್ 350 ಹೊಸ 350 ಸಿಸಿ ಎಂಜಿನ್ ಅನ್ನು ಪಡೆಯಲಿದ್ದು ಅದು 20.2 ಬಿಎಚ್‌ಪಿ ಪವರ್ ಮತ್ತು 27 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ ಕೂಡ ಟ್ರಿಪ್ಪರ್ ನ್ಯಾವಿಗೇಷನ್ ಹೊಂದಿರಲಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ (Royal Enfield Himalayan)

ಕಂಪನಿಯು 2022 ರಲ್ಲಿ ಹಿಮಾಲಯನ್‌ನ ಹೊಸ ಮಾದರಿಯನ್ನು ಬಿಡುಗಡೆ ಮಾಡಲಿದೆ. ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ಆಫ್-ರೋಡರ್‌ನಿಂದ ವಿಭಿನ್ನ ರಸ್ತೆಯಲ್ಲಿ ಚಲಾಯಿಸಲು ವಿನ್ಯಾಸಗೊಳಿಸಲಾಗಿದೆ. ಹೊಸ ಬೈಕ್‌ನ ಹೆಸರು ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಆಗಿರಬಹುದು, ಇದು ಹಿಮಾಲಯನ್ ಮೂಲದ ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್ ಆಗಿದೆ. ಕಂಪನಿಯು ಈ ಮೋಟಾರ್‌ ಸೈಕಲ್‌ನೊಂದಿಗೆ ಸಿಂಗಲ್-ಪಾಡ್ ಇನ್‌ಸ್ಟ್ರುಮೆಂಟ್ ಕನ್ಸೋಲ್ ಮತ್ತು ಟ್ರಿಪ್ಪರ್ ನ್ಯಾವಿಗೇಶನ್ ಸಹ ಒದಗಿಸಲಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬಾಬ್ಬರ್ (Royal Enfield Bobber)

ರಾಯಲ್ ಎನ್‌ಫೀಲ್ಡ್‌ನ ಹೊಸ ಕ್ಲಾಸಿಕ್ 350 ಆಧಾರಿತ ಮುಂಬರುವ ಬಾಬ್ಬರ್ ಮೋಟಾರ್‌ಸೈಕಲ್ ಕೂಡ 2022 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಬೈಕ್‌ಗೆ ಬಾಬ್ಬರ್ ಶೈಲಿಯನ್ನು ನೀಡಲು, ಅದೇ ರೀತಿಯ ಹ್ಯಾಂಡಲ್‌ಬಾರ್ ಮತ್ತು ಬಾಬ್ಬರ್ ಸೀಟ್ ಅನ್ನು ಅದರೊಂದಿಗೆ ನೀಡಲಿದೆ. ಹಂಟರ್‌ನಂತೆ, ಮೆಟಿಯರ್ 350 ರ ಎಂಜಿನ್ ಅನ್ನು ಹೊಸ ಮೋಟಾರ್‌ ಸೈಕಲ್‌ ನಲ್ಲಿ ನೀವು ಕಾಣಬಹುದು. ಈ ಹೊಸ ಬೈಕ್‌ನೊಂದಿಗೆ ಕಂಪನಿಯು ಗ್ರಾಹಕರ ಗಮನವನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವ ನಿರೀಕ್ಷೆಯನ್ನು ಹೊಂದಿದೆ.

Leave A Reply

Your email address will not be published.