ಇತ್ತೀಚಿನ ಆನ್ಲೈನ್ ಯುಗದಲ್ಲಿ ಮದುವೆಗಳು ಕೂಡಾ ಆನ್ಲೈನ್ ನಲ್ಲೇ ಆಗುತ್ತಿದೆ. ಮೆಟಾವರ್ಸ್ ನಲ್ಲಿ ಡಿಜಿಟಲ್ ಮೂಲಕ ಮದುವೆಯಾಗಿರುವ ತಮಿಳು ದಂಪತಿಯ ಬಳಿಕ ಈಗ ಪುಣೆ ಮೂಲದ ಜೋಡಿಯೊಂದು ಬ್ಲಾಕ್ ಚೈನ್ ಮೂಲಕ ವಿವಾಹವಾಗಿದ್ದಾರೆ.
ನ.15, 2021 ರಂದು ಸಾಂಕ್ರಾಮಿಕ ರೋಗ ಕಾರಣದಿಂದಾಗಿ ಈ ಜೋಡಿ ಕಾನೂನು ಬದ್ಧವಾಗಿ ಮದುವೆ ಆಗಿದ್ದರು. ಇದೀಗ ತಮ್ಮ ಈ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಪುಣೆಯ ಅನಿಲ್ ಮತ್ತು ಅವರ ಪತ್ನಿ ಶ್ರುತಿ ನಾಯರ್ ಬ್ಲಾಕ್ ಚೈನ್ ಮೂಲಕ ಅಧಿಕೃತವಾಗಿ ಮದುವೆಯಾಗಿದ್ದಾರೆ.
ಕುಟುಂಬಸ್ಥರು ಮತ್ತು ಸ್ನೇಹಿತರು ಗೂಗಲ್ ಮೀಟ್ ನಲ್ಲಿ ಇವರಿಬ್ಬರು ಲ್ಯಾಪ್ ಟಾಪ್ ಮುಂದೆ ಕುಳಿತು ಪ್ರತಿಜ್ಞೆ ಮಾಡಿಕೊಳ್ಳುವುದನ್ನು ವೀಕ್ಷಿಸಿದ್ದಾರೆ. ಈ ಮದುವೆಯ ಸಮಾರಂಭ 15 ನಿಮಿಷದಲ್ಲಿ ಮುಗಿದಿದೆ. ದಂಪತಿಗಳು ಮಾಡಿದ ಎನ್ ಎಫ್ ಟಿಯು ಶ್ರುತಿ ಅವರ ನಿಶ್ಚಿತಾರ್ಥದ ಉಂಗುರದ ಫೋಟೋವಾಗಿದ್ದು ಚಿತ್ರದ ಮೇಲೆ ಪ್ರತಿಜ್ಞೆಗಳನ್ನು ಬರೆಯಲಾಗಿದೆ.
ಈ ರೀತಿಯ ಮದುವೆ ಸರಿಯೋ ತಪ್ಪೋ ಎಂಬುವುದು ನಮಗೆ ಗೊತ್ತಿಲ್ಲ. ಆದರೆ ಈ ರೀತಿಯ ಮದುವೆ ಆಗಲು ನಾವು ತುಂಬಾ ಯೋಚನೆ ಮಾಡಿ ಮದುವೆ ಆಗಿದ್ದೇವೆ. ಈ ಬಗ್ಗೆ ಹಲವು ಭಿನ್ನಾಭಿಪ್ರಾಯಗಳು ಬಂದವು. ಆದರೂ ನಾವು ಜೊತೆಗಿದ್ದು, ಈ ಸಾಹಸಕ್ಕೆ ಕೈ ಹಾಕಿದೆವು.
ಶೃತಿ ಮತ್ತು ನಾನು ಮದುವೆಯನ್ನು ಎಥೆರಿಯಮ್ ಸ್ಮಾರ್ಟ್ ಒಪ್ಪಂದದೊಂದಿಗೆ ಬ್ಲಾಕ್ ಚೈನ್ ಅಧಿಕೃತ ಗೊಳಿಸಿದ್ದೇವೆ ಎಂದು ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ತಿಳಿದ್ದಾರೆ ಜೋಡಿಗಳು.