ಮನೆಯಲ್ಲಿ ಊಟ ಮಾಡಿದ ಕೂಡಲೇ ಆರೋಗ್ಯ ಹದಗೆಡಲು ಪ್ರಾರಂಭ| ಡಾಕ್ಟರ್ ನ್ನು ಸಂಪರ್ಕಿಸಿದಾಗ ಗೊತ್ತಾಯಿತು ಘೋರ ಸತ್ಯ | ಆರೋಗ್ಯ ಹದಗೆಡಲು ಮಡದಿಯೇ ಕಾರಣ |
ತನ್ನ ಗಂಡನಿಗೆ ಊಟದಲ್ಲಿ ಕಳೆದ 6 ವರ್ಷದಿಂದಲೂ ಡ್ರಗ್ಸ್ ಹಾಕುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಪಲಾ ನಿವಾಸಿ ಆಶಾ ಸುರೇಶ್ ( 36) ಎಂದು ಗುರುತಿಸಲಾಗಿದೆ.
ಊಟದಲ್ಲಿ ಡ್ರಗ್ಸ್ ಬೆರೆಸುತ್ತಿದ್ದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಕೇರಳ ಪೊಲೀಸರು ಕೊಟ್ಟಾಯಂನಲ್ಲಿ ಬಂಧಿಸಿದ್ದಾರೆ.
2006 ರಲ್ಲಿ ತಿರುವನಂತಪುರಂ ಮೂಲದ ಸತೀಶ್ ಎಂಬಾತನನ್ನು ಈಕೆ ಮದುವೆಯಾಗುತ್ತಾಳೆ. ನಂತರ ಇಬ್ಬರೂ ಪಲಾದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮೊದಮೊದಲಿಗೆ ಸತೀಶ್ ಗೆ
ಬ್ಯುಸಿನೆಸ್ ನಲ್ಲಿ ತುಂಬಾ ನಷ್ಟ ಉಂಟಾಯಿತು. ಅನಂತರ ಆತ ಐಸ್ ಕ್ರೀಂ ವ್ಯವಹಾರವನ್ನು ಶುರು ಮಾಡಿದ ನಂತರ ಆತನಿಗೆ ಒಳ್ಳೆ ಲಾಭ ದೊರೆಯಿತು. ಒಳ್ಳೆಯ ಲಾಭ ದೊರೆತಿದ್ದರಿಂದ 2012 ರಲ್ಲಿ ಸತೀಶ್ ಪಾಲಕ್ಕಾಡ್ ನಲ್ಲಿ ಒಂದು ಮನೆಯನ್ನು ಖರೀದಿ ಮಾಡುತ್ತಾನೆ.ಅನಂತರ ಆಶಾ ಅನಾವಶ್ಯಕವಾಗಿ ಕ್ಷುಲ್ಲಕ ಕಾರಣಕ್ಕೆ ಗಂಡನೊಂದಿಗೆ ಜಗಳ ಮಾಡುತ್ತಿದ್ದಳಂತೆ. ಇದರ ಜೊತೆ ಜೊತೆಗೆ ಸತೀಶ್ ಗೆ ತನ್ನ ಆರೋಗ್ಯದಲ್ಲಿ ಏರುಪೇರಾಗುವುದು ಕ್ರಮೇಣ ಕಂಡು ಬಂದಿದೆ. ಹೆಚ್ಚು ಸುಸ್ತಾಗುವುದು ಇತ್ಯಾದಿ. ಡಾಕ್ಟರ್ ನ್ನು ಸಂಪರ್ಕಿಸಿದಾಗ ಡಾಕ್ಟರ್ ನಿಮ್ಮಲ್ಲಿ ಸಕ್ಕರೆ ಅಂಶ ಕಡಿಮೆ ಆಗಿದೆ ಎಂದು ಹೇಳುತ್ತಾರೆ. ಔಷಧಿ ತೆಗೆದುಕೊಂಡರೂ ಆರೋಗ್ಯ ಸರಿಆಗುವುದಿಲ್ಲ.
ಇತ್ತೀಚೆಗೆ ಸತೀಶ್ ಮನೆಯಲ್ಲಿ ಊಟ ಮಾಡುವುದನ್ನು ತಪ್ಪಿಸಿ ಹೊರಗಡೆ ಊಟ ಮಾಡಿದಾಗ ಆತನಿಗೆ ಆರೋಗ್ಯದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಇದರಿಂದ ಅನುಮಾನಗೊಂಡ ಸತೀಶ್ ಹೆಂಡತಿಯ ಸ್ನೇಹಿತೆಯಲ್ಲಿ, ತನ್ನ ಹೆಂಡತಿ ಊಟದಲ್ಲಿ ಏನಾದರೂ ಹಾಕಿಕೊಡುತ್ತಾಳಾ ಕೇಳು ಎಂದು ಮನವಿ ಮಾಡುತ್ತಾನೆ. ಸ್ನೇಹಿತೆ ಸತೀಶ್ ಹೆಂಡತಿಗೆ ಫೋನ್ ಮಾಡಿ ಮಾತನಾಡುವಾಗ ಎಲ್ಲವನ್ನೂ ಹೇಳುತ್ತಾಳೆ. ಪ್ರತಿದಿನ ಊಟದಲ್ಲಿ ಡ್ರಗ್ಸ್ ಬೆರೆಸುತ್ತಿರುವುದಾಗಿ ಹೇಳುತ್ತಾಳೆ. ಅಲ್ಲದೇ ಮೆಡಿಸಿನ್ ನ ಫೋಟೋವನ್ನು ಕೂಡಾ ರವಾನಿಸುತ್ತಾಳೆ. ಇದಾದ ಬಳಿಕ ಸತೀಶ್ ಗೆ ಪತ್ನಿಯ ಇನ್ನೊಂದು ಮುಖದ ಪರಿಚಯವಾಗುತ್ತದೆ. ಬಳಿಕ ಮನೆಯ ಸಿಸಿಟಿವಿ ಪರಿಶೀಲಿಸಿದಾಗ ಪತ್ನಿಯ ಕೃತ್ಯ ದೃಶ್ಯ ಸಮೇತ ಕಾಣಸಿಗುತ್ತದೆ.
ಇದಾದ ನಂತರ ಪತ್ನಿ ಆಶಾ ವಿರುದ್ಧ ಸತೀಶ್ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತಾನೆ. ಆಶಾಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆಕೆ ಗಂಡ ತನ್ನ ಹೆಸರಿನಲ್ಲಿ ಯಾವುದೇ ಆಸ್ತಿ ಮಾಡದೇ ಎಲ್ಲಾ ಆಸ್ತಿಯನ್ನು ತನ್ನ ಕುಟುಂಬ ಮತ್ತು ಸಹೋದರರಿಗೆ ಬರೆದಿದ್ದಾನೆ ಅದಕ್ಕೆ ಹೀಗೆ ಮಾಡಿದ್ದೇನೆ ಎಂಬ ಹೇಳಿಕೆ ನೀಡುತ್ತಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದಾರೆ.