ಪ್ರೀತಿ-ಪ್ರೀತಿಸಿದಾತನ ಅರಸಿ ಆರು ಸಾವಿರ ಕಿಮೀ ದೂರದಿಂದ ಬಂದಿದ್ದ ಯುವತಿಯ ಬರ್ಬರ ಹತ್ಯೆ!!

Share the Article

ತನ್ನ ಪ್ರೀತಿಯನ್ನು ಉಳಿಸಿಕೊಳ್ಳುವ ಆಸೆಯಿಂದ, ಪ್ರೀತಿಸಿದಾತನ ಅರಸಿ ಹೊರದೇಶದಿಂದ ಬಂದಿದ್ದ ಯುವತಿಯೋರ್ವಳ ಬರ್ಬರ ಹತ್ಯೆ ನಡೆದಿದ್ದು, ಕೊನೆಗೂ ಆಕೆಯ ಆಸೆ ಈಡೇರದೆ ಪರಮಣ್ಣಿನಲ್ಲಿ ಅನ್ಯಾಯವಾಗಿ ಇಹಲೋಕವನ್ನೇ ತ್ಯಜಿಸಿದ ಅಮಾನುಷ ಘಟನೆಗೆ ಯು.ಕೆ ಸಾಕ್ಷಿಯಾಗಿದೆ.

ಹೌದು. ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯನ್ನು ಕೆನಡಾ ಮೂಲದ ಆಸ್ಲೆ ವರ್ಡ್ಸ್ ವರ್ತ್ ಎಂದು ಗುರುತಿಸಲಾಗಿದ್ದು ಕೊಲೆ ಆರೋಪದಡಿಯಲ್ಲಿ ಓರ್ವನನ್ನು ಬಂಧಿಸಲಾಗಿದೆ. ತನ್ನ ಪ್ರೀತಿಸಿದಾತನ ಕಾಣಲು ಸುಮಾರು ಆರು ಸಾವಿರ ಕಿಲೋ ಮೀಟರ್ ದೂರದಿಂದ ಬಂದು ಫ್ಲಾಟ್ ಒಂದರಲ್ಲಿ ಉಳಿದುಕೊಂಡಿದ್ದ ಆಸ್ಲೆಯನ್ನು ಹಣಕ್ಕಾಗಿ ಕೊಲೆ ನಡೆಸಿರಬಹುದೆಂದು ಶಂಕಿಸಲಾಗಿದ್ದು, ವಿಚಾರಣೆಯ ಬಳಿಕ ಸತ್ಯ ಹೊರಬೀಳಲಿದೆ.

Leave A Reply