ಮದ್ಯಪ್ರಿಯರೇ ಗಮನಿಸಿ : ಮುಂಬರುವ ಬಜೆಟ್ ನಲ್ಲಿ ಮದ್ಯದ ಬೆಲೆ ಹೆಚ್ಚಳಕ್ಕೆ ರಾಜ್ಯ ಸರಕಾರ ನಿರ್ಧಾರ|ಫೆ. 25 ರಂದು ನಿರ್ಧಾರ!!!

ರಾಜ್ಯ ಸರಕಾರ ಮುಂಬರುವ ಬಜೆಟ್ ನಲ್ಲಿ ಮದ್ಯದ ಬೆಲೆ ಹೆಚ್ಚಿಸಲು ಚಿಂತನೆ ನಡೆಸಿದೆ. ಕೊರೊನಾದಿಂದಾಗಿ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಲು ಈ ಮೂಲಕ ಪ್ರಯತ್ನ ಪಡುತ್ತಿದೆ ಸರಕಾರ.

ಇಂಡಿಯನ್ ಮೇಡ್ ಲಿಕ್ಕರ್ ( ಐಎಂಎಲ್ ) ಹಾಗೂ ಬಿಯರ್ ಮೇಲೆ ಶೇ. 5 ರಿಂದ 10 ರವರೆಗೆ ಅಬಕಾರಿ ಸುಂಕ ವಿಧಿಸಲು ಆಲೋಚಿಸಿದ್ದು, ಫೆ. 25 ಕ್ಕೆ ‌ನಡೆಯುವ ಸಭೆಯಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.

2019-20 ರಲ್ಲಿ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.150 ರಿಂದ ಶೇ.175 ಕ್ಕೆ ಹೆಚ್ಚಿಸಲಾಗಿತ್ತು. ಡ್ರಾಟ್ ಬಿಯರ್ ಮೇಲೆ ಶೇ.115 ರಿಂದ ಶೇ. 150 ಕ್ಕೆ , ಮೈಕ್ರೋ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಮೇಲೆ 5 ರೂ‌ ನಿಂದ 10 ರೂ. ಏರಿಸಲಾಯಿತು‌ ಜೊತೆಗೆ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಬಲ್ಕ್ ಲೀ. ಗೆ 12.50 ರೂ.ನಿಂದ 25 ರೂ. ಗೆ ಏರಿಸಲಾಗಿತ್ತು.

ಐಎಂಎಲ್ ಮೇಲೆ ಅಬಕಾರಿ ಸುಂಕವನ್ನು ಶೇ. 122 ರಿಂದ ಶೇ.150 ಕ್ಕೆ ಏರಿಸಲಾಗಿತ್ತು. 2020-21 ರ ಬಜೆಟ್ ನಲ್ಲಿ ಮದ್ಯದ ಮೇಲೆ ಶೇ.6 ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿತ್ತು.

ಆದರೆ ಲಾಕ್ ಡೌನ್ ಆದ ನಂತರ ಇದು ಜಾರಿಗೆ ಬಂದಿರಲಿಲ್ಲ.

2021 ರ ಮೇ ನಲ್ಲಿ ಬಿಯರ್ ಮತ್ತು ವೈನ್ ಹೊರತುಪಡಿಸಿ ಐಎಂಎಲ್ ಮೇಲೆ ಶೆ.17 ಅಬಕಾರಿ ಸುಂಕ ಹೆಚ್ಚಿಸಲಾಗಿತ್ತು. ಈ ಕ್ರಮದಿಂದ ಪ್ರತಿ ಬಲ್ಕ್ ಲೀಟರ್ ಗೆ 153 ರೂ. ನಿಂದ ರೂ.179 ರೂ ವರೆಗೆ ಏರಿಕೆ ಆಗಿದೆ. ಕಳೆದ ಬಾರಿಯ ಬಜೆಟ್ ನಲ್ಲಿ ಕೂಡಾ ಮದ್ಯ ದರ ಏರಿಕೆ ಕಂಡಿಲ್ಲ.

ಮದ್ಯ ಮಾರಾಟದಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ಬರುತ್ತಿರುವುದರಿಂದ ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಇಲಾಖೆಗೆ ಹೊಸ‌ ಆದಾಯ ಸಂಗ್ರಹ ಗುರಿ ನೀಡಲಾಗುತ್ತದೆ.

ರಾಜ್ಯ ಸರಕಾರ ಬೆಲೆ ಹೆಚ್ಚಳ ಮಾಡಿ ಆದಾಯ ಸಂಗ್ರಹ ದಿಂದ 2022-23 ಸಾಲಿನಲ್ಲಿ ಅಂದಾಜು 27 ಸಾವಿರ ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಹೊಂದಿದೆ.

Leave A Reply

Your email address will not be published.