ಇಡೀ ರಾಜ್ಯವನ್ನೇ ವ್ಯಾಪಿಸುತ್ತಿದೆ ಹಿಜಾಬ್ ವಿವಾದ !!. | ಸಾಂಸ್ಕೃತಿಕ ನಗರಿಯಲ್ಲಿ ಕಾಲೇಜಿಗೆ ಹಿಜಾಬ್ ಧರಿಸಿ ಹೋಗುವ ಮೂಲಕ ಸರ್ಕಾರದ ನಿಯಮಕ್ಕೆ ಸೆಡ್ಡುಹೊಡೆದ ಮುಸ್ಲಿಂ ವಿದ್ಯಾರ್ಥಿನಿಯರು
ಕರಾವಳಿ ಜಿಲ್ಲೆಗಳಲ್ಲಿ ಆರಂಭವಾದ ಹಿಜಾಬ್ ವಿವಾದ ಇದೀಗ ಇಡೀ ರಾಜ್ಯವನ್ನು ವ್ಯಾಪಿಸುತ್ತಿದ್ದು, ಉಡುಪಿ ಹಾಗೂ ಕುಂದಾಪುರ ಬಳಿಕ ಇದೀಗ ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲೂ ಹಿಜಾಬ್ ವಿವಾದ ಪ್ರತಿಧ್ವನಿಸುತ್ತಿದೆ. ಕಾಲೇಜಿಗೆ ಹಿಜಾಬ್ ಧರಿಸಿ ಹೋಗುವ ಮೂಲಕ ಕೆಲ ವಿದ್ಯಾರ್ಥಿನಿಯರು ಸರ್ಕಾರದ ನಿಯಮಕ್ಕೆ ಸೆಡ್ಡು ಹೊಡೆದಿದ್ದಾರೆ.
ವಿದ್ಯಾರ್ಥಿನಿಯರು ಮೈಸೂರಿನ ಬನ್ನಿಮಂಟಪದ ಹೈವೆ ಸರ್ಕಲ್ ಬಳಿ ಹಿಜಾಬ್ ಅಭಿಯಾನ ನಡೆಸುತ್ತಿದ್ದು, ಐ ಲವ್ ಹಿಜಾಬ್ ಎಂಬ ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಿ, ಪರಸ್ಪರ ಹಿಜಾಬ್ ತೊಡಿಸಿ ಪ್ರತಿಭಟಿಸಿದ್ದಾರೆ. ಅಲ್ಲದೇ ಎಲ್ಲಾ ಕಾಲೇಜಿನಲ್ಲೂ ಹಿಜಾಬ್ಗೆ ಅವಕಾಶ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಉಡುಪಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬೆಂಬಲ ವ್ಯಕ್ತಪಡಿಸಿದರು.
ಬೆಳಗಾವಿಯ ರಾಮದುರ್ಗ ಕಾಲೇಜಿನಲ್ಲಿಯೂ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಬಂದ ಸಂದರ್ಭದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿದ ಘಟನೆ ನಡೆಯಿತು.