ಇನ್‌ಸ್ಟಾಗ್ರಾಮ್‌ ತನ್ನ ಗ್ರಾಹಕರಿಗಾಗಿ ತೋರಿಸಲಿದೆ ಹೊಸ ಕೇರ್ !! |ಅದೇ ‘TAKE A BREAK’ ಎಂಬ ಹೊಸ ಫೀಚರ್

Share the Article

ನೀವು ಕೂಡ ಇನ್‌ಸ್ಟಾಗ್ರಾಮ್‌ ಬಳಕೆದಾರರೇ??ನೀವು ಇನ್‌ಸ್ಟಾಗ್ರಾಮ್‌ನಲ್ಲಿ ದಿನಕ್ಕೆ ಎಷ್ಟು ಹೊತ್ತು ಕಾಲ ಕಳೆಯುತ್ತೀರಿ?? ನೀವು ಫಾಲೋ ಮಾಡುವ ವ್ಯಕ್ತಿಗಳ ಹೊಸ ಹೊಸ ಪೋಸ್ಟ್‌ಗಳು ನೋಡಲು ಒಂದು ಬಾರಿ ಪ್ರಾರಂಭಿಸಿದರೆ ಸ್ಕ್ರೋಲ್ ಮಾಡುತ್ತಲೇ ಹೋಗುತ್ತೀರಿ ಅಲ್ಲವೇ…

ಹೌದು, ದಿನವಿಡೀ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳನ್ನು ನೋಡುತ್ತಾ, ಮಾಡುತ್ತಾ ಕಾಲಹರಣ ಮಾಡುವವರು ನಮ್ಮಲ್ಲಿ ಬೇಕಾದಷ್ಟು ಜನ ಇದ್ದಾರೆ. ಈ ರೀತಿ ದಿನವಿಡೀ ಕಾಲಹರಣ ಮಾಡುವವರಿಗಾಗಿ ಇನ್‌ಸ್ಟಾಗ್ರಾಮ್ ಹೊಸ ಫೀಚರ್ ತಂದಿದೆ. ಅದೇ ಟೇಕ್ ಎ ಬ್ರೇಕ್(Take a Break) ಫೀಚರ್.

ಇನ್‌ಸ್ಟಾಗ್ರಾಮ್ ನೋಡಿಕೊಂಡು ದಿನ ಕಳೆಯುವ ಯುವಜನರು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದಾರೆ. ಇದು ಜನರ ಮಾನಸ್ಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ಇನ್‌ಸ್ಟಾಗ್ರಾಮ್ ಬಳಕೆದಾರರ ಆರೋಗ್ಯದ ದೃಷ್ಟಿಯಿಂದ ಈ ಫೀಚರ್ ಹೊರ ತಂದಿದೆ. ಟೇಕ್ ಎ ಬ್ರೇಕ್ ಫೀಚರ್ ಬಳಕೆದಾರರಿಗೆ ನಿರ್ದಿಷ್ಟ ಸಮಯಗಳಲ್ಲಿ ವಿರಾಮ ತೆಗೆದುಕೊಳ್ಳುವಂತೆ ಜ್ಞಾಪಿಸುತ್ತದೆ.

ಯುವಜನರ ಯೋಗಕ್ಷೇಮ ನಮಗೆ ಮುಖ್ಯವಾಗಿದೆ. ಹೀಗಾಗಿ ಟೇಕ್ ಎ ಬ್ರೇಕ್ ಫೀಚರ್ ಹೊರತಂದಿದ್ದೇವೆ. ಇದು ಬಳಕೆದಾರರು ಇನ್‌ಸ್ಟಾಗ್ರಾಮ್‌ನಿಂದ ವಿರಾಮ ಪಡೆಯಲು ನೆನಪಿಸುತ್ತದೆ ಎಂದು ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಇಂಡಿಯಾದ ಸಾರ್ವಜನಿಕ ನೀತಿ ವ್ಯವಸ್ಥಾಪಕ ನತಾಶಾ ಜೋಗ್ ತಿಳಿಸಿದ್ದಾರೆ.

ಟೇಕ್ ಎ ಬ್ರೇಕ್ ರಿಮೈಂಡರ್ ಇನ್‌ಸ್ಟಾಗ್ರಾಮ್ ಬಳಕೆಯಲ್ಲಿ ದಿನದ ಮಿತಿಯನ್ನು ತಲುಪಿದ ತಕ್ಷಣ ವಿರಾಮ ತೆಗೆದುಕೊಳ್ಳುವಂತೆ ಸೂಚನೆ ನೀಡುತ್ತದೆ. ಬಳಿಕ ಈ ಸೂಚನೆಯನ್ನು ಬಳಕೆದಾರರು ಮ್ಯೂಟ್ ಮಾಡಬಹುದು. ಈ ಫೀಚರ್ ಮೊದಲು ಅಮೆರಿಕಾ, ಯುಕೆ, ಐರ್‌ಲ್ಯಾಂಡ್, ಕೆನಡಾ, ಆಸ್ಟ್ರೇಲಿಯಾದಲ್ಲಿ ಲಭ್ಯವಿತ್ತು. ಇದೀಗ ಜಾಗತಿಕವಾಗಿ ಎಲ್ಲಾ ದೇಶಗಳಲ್ಲೂ ಲಭ್ಯವಿದೆ. ಸದ್ಯ ಐಒಎಸ್ ಬಳಕೆದಾರರಿಗೆ ಈ ಫೀಚರ್ ಲಭ್ಯವಾಗಿದ್ದು ಶೀಘ್ರವೇ ಆಂಡ್ರಾಯ್ಡ್‌ಗೂ ಬರಲಿದೆ.

Leave A Reply