ಅಪರಾಧ ಪ್ರಕರಣದಲ್ಲೂ ಸಹಾಯ ಮಾಡಲಿದೆ ಬಿಯರ್ ವಿಸ್ಕಿ ಬಾಟಲ್ | ಕರ್ನಾಟಕದಲ್ಲೂ ಇನ್ನು ಮುಂದೆ ಈ ಲೇಬಲ್ ಅಂಟಿಸಲು ಸೂಚನೆ!!!

ಇನ್ನು ಮುಂದೆ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಸಹಾಯಕಾರಿಯಾಗಲಿದೆ ಮದ್ಯ. ಅಪರಾಧ ಪ್ರಕರಣ ಪತ್ತೆಗೂ ನೆರವಾಗುವ ದಿಕ್ಕಿನಲ್ಲಿ ಹೈ ಆಂಡ್ ಸೆಕ್ಯುರಿಟಿ ಅಂಶಗಳನ್ನು ಅಳವಡಿಸಿರುವ ಇಎಎಲ್ ( ಎಕ್ಸೈಸ್ ಅಧೆಸ್ವಿ ಲೇಬಲ್ಸ್) ಗಳನ್ನು ವಿಸ್ಕಿ, ರಮ್, ವೊಡ್ಕಾ, ಜಿನ್ ಇತ್ಯಾದಿ ಮದ್ಯದ ಬಾಟಲಿ, ಪೌಚ್ ಗಳ ಮೇಲೆ ಅಂಟಿಸಲು ಯೋಜನೆ ರೂಪಿಸಲಾಗುತ್ತಿದೆ.

ಇದರಿಂದಾಗಿ ಮದ್ಯದ ಬಾಟಲಿ ಮೇಲಿನ ಲೇಬಲ್ ಸ್ಕ್ಯಾನ್ ಮಾಡಿದರೆ ಎಲ್ಲಿ ಮದ್ಯವನ್ನು ಖರೀದಿಸಲಾಗಿದೆ ಎಂಬ ವಿವರ ಗೊತ್ತಾಗುತ್ತದೆ.

ಇಲ್ಲೂ ಆದಾಯ ಹೆಚ್ಚಳಕ್ಕಾಗಿ ಇಲಾಖೆ ಬಿಯರ್ ಬಾಟಲಿಗಳ ಮೇಲೂ ಇಎಎಎಲ್ ಅಂಟಿಸಿ, ಪ್ರತಿ ಲೇಬಲ್ ಗೆ ಒಂದು ರೂ. ಶುಲ್ಕ ವಿಧಿಸಿದರೆ ತಿಂಗಳಿಗೆ 50-60 ಕೋಟಿ ರೂ. ಗಳಂತೆ ವಾರ್ಷಿಕ ಅಂದಾಜು 600 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹಿಸಬಹುದೆಂದು ಅಧ್ಯಯನ ತಂಡದ ಲೆಕ್ಕಾಚಾರ.

ದೇಶದ 9 ರಾಜ್ಯಗಳಲ್ಲಿ ಬಿಯರ್ ಬಾಟಲಿಗಳ ಮೇಲೆ ಇಎಎಲ್ ಅಂಟಿಸಲಾಗುತ್ತಿದೆ. ಒರಿಸ್ಸಾ, ಪಶ್ಚಿಮ ಬಂಗಾಲ ಇತ್ಯಾದಿ ರಾಜ್ಯಗಳಲ್ಲಿ ಕಳೆದ ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಪ್ರವಾಸ ನಡೆಸಿರುವ ಇಲಾಖೆ ಜಂಟಿ ಆಯುಕ್ತರ ನೇತೃತ್ವದ ತಂಡವೊಂದು ಕರ್ನಾಟಕದಲ್ಲೂ ಬಿಯರ್ ಬಾಟಲಿ ಮೇಲೂ ಇದನ್ನು ಅಂಟಿಸುತ್ತದೆ.

ಕರ್ನಾಟಕದ ಖಾಸಗಿ ಪ್ರಿಂಟಿಂಗ್ ಪ್ರೆಸ್ ನಲ್ಲಿ ತಯಾರಿಸುತ್ತಿರುವ ಪೇಪರ್ ನ ಈ ಲೇಬಲ್ ವೊಂದಕ್ಕೆ 27 ಪೈಸೆ ಖರ್ಚಾಗುತ್ತಿದೆ. ಒರಿಸ್ಸಾದ ಅಬಕಾರಿ ಇಲಾಖೆ ಇಂಡಿಯಾ ಸೆಕ್ಯುರಿಟಿ ಪ್ರೆಸ್ ನಲ್ಲಿ ಮುದ್ರಿಸುತ್ತಿದೆ. ಮತ್ತೊಂದು ರಾಜ್ಯದಲ್ಲಿ ಒಂದು ರೂಪಾಯಿಯಂತೆ ಲೇಬಲ್ ಗೆ ಶುಲ್ಕ ಇದೆ. ಕೆಲವು ರಾಜ್ಯಗಳಲ್ಲಿ ಇಎಎಲ್ ತಯಾರಿಸಲು ಪಾಲಿಸ್ಟರ್ ಬಳಸಲಾಗುತ್ತದೆ.

ಈ ಇಎಎಲ್ ನಲ್ಲಿ ಯಾವೆಲ್ಲ ಅಂಶಗಳು ಇವೆ ? ಕರ್ನಾಟಕ ಸರಕಾರದ ಲೋಗೋ, 2 ಡಿ ಬಾರ್ ಕೋಡ್, ತಿಂಗಳು ಮತ್ತು ವರ್ಷ, 10 ಅಂಕಿಗಳ ಸೀರಿಯಲ್ ನಂ., ಐಟಂ ಕೋಡ್, ಸ್ಟೇಟ್ ಕೋಡ್, ಚೆಕ್ ಡಿಜಿಟ್, ಸೆಕ್ಯುರಿಟಿ ಡೈಮಂಡ್ ಕಟ್, ಕಮಿಷನರ್ ಸಹಿ ಇತ್ಯಾದಿ 14 ಅಂಶಗಳು ಲೇಬಲ್ ನಲ್ಲಿದೆ.

Leave A Reply

Your email address will not be published.