ಶಾಲಾ-ಕಾಲೇಜುಗಳಲ್ಲಿ ಒಂದೇ ಸಮವಸ್ತ್ರದ ಅಡಿಯಲ್ಲಿ ವಿದ್ಯಾಭ್ಯಾಸ ನಡೆಯಲಿ | ಹಿಜಾಬ್ ಕುರಿತಾಗಿ ರಾಮ್ ಸೇನಾ ಕರ್ನಾಟಕ ಸಂಘಟನೆಯಿಂದ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗೆ ಮನವಿ

ಹಿಜಾಬ್ ವಿಚಾರವಾಗಿ ನಡೆದ ಚರ್ಚೆ ದಿನದಿಂದ ದಿನಕ್ಕೆ ಮುಂದುವರಿಯುತ್ತಲೇ ಇದ್ದು, ಇದೀಗ ರಾಮ್ ಸೇನಾ ಕರ್ನಾಟಕ (ರಿ ) ಸಂಘಟನೆಯು ಕರ್ನಾಟಕದ ಘನ ಸರಕಾರ ಹಾಗೂ ಶಿಕ್ಷಣಮಂತ್ರಿಗಳು ಹಾಗೂ ರಾಜ್ಯದ ಎಲ್ಲಾ ಶಾಲಾ, ಕಾಲೇಜುಗಳ ಆಡಳಿತ ಮಂಡಳಿಗೆ ಈ ವಿಚಾರವಾಗಿ ಮನವಿಯನ್ನು ಮಾಡಿದೆ.

ಶಾಲಾ ಕಾಲೇಜುಗಳಲ್ಲಿ ಇಂತಹ ಯಾವುದೇ ವಿಚಾರಗಳಿಗೆ ಆಸ್ಪದ ಕೊಡದೆ, ಎಲ್ಲರೂ ಒಂದೇ ಸಮವಸ್ತ್ರದ ಅಡಿಯಲ್ಲಿ ವಿದ್ಯಾಭ್ಯಾಸ ನಡೆಸುವಂತೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದೆ.

‘ಶಾಲೆಯ ಒಳಗಡೆ ಸಮವಸ್ತ್ರ ಖಡ್ಡಾಯ, ಶಾಲಾ ನಿಯಮಗಳನ್ನು ಪಾಲಿಸೋದು ಬಿಟ್ಟು ನಿಮ್ಮ ಧಾರ್ಮಿಕ ಆಚರಣೆಗಳನ್ನು ಶಾಲಾ ವಠಾರದ ಒಳಗಡೆ ತೆಗೆದುಕೊಂಡು ಬಂದರೆ ಚೆನ್ನಾಗಿರೊಲ್ಲ. ಇವತ್ತು ಹಿಜಾಬ್ ಅಂತೀರಾ ನಾಳೆ ಬುರ್ಖಾನೂ ಬೇಕು ಅಂತೀರಾ. ನಿಮ್ಗಳಿಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಗಳಲ್ಲಿ ಸ್ಕಾರ್ಫ್ ಬಿಚ್ಚಿಟ್ಟು ಫೋಟೋ ವೈರಲ್ ಮಾಡ್ಬೇಕಾದ್ರೆ ಏನು ಸಮಸ್ಯೆ ಆಗೋಲ್ಲ ಅದೇ ಶಾಲೆ ಒಳಗಡೆ ಸ್ಕಾರ್ಫ್ ಇಲ್ಲದೇ ಇದ್ರೆ ಸಮಸ್ಯೆ. ನಿಮ್ಮ ಆಚರಣೆಗಳನ್ನು ನಿಮ್ಮ ಮನೆಗಳಲ್ಲೇ ಇಟ್ಟುಕೊಂಡರೆ ನಿಮಗೂ ಒಳ್ಳೇದು ಸಮಾಜಕ್ಕೂ ಒಳ್ಳೇದು. ನೀವುಗಳು ಹುನ್ನಾರ ಮಾಡಿ ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕೆಡಿಸಿ ದಂಗೆ ನಡೆಸೋ ಪ್ಲಾನ್ ಮಾಡ್ತಾ ಇದ್ದೀರ ಅನ್ನೋದು ಸಣ್ಣ ಮಕ್ಕಳಿಗೂ ತಿಳಿದಿರೋ ವಿಚಾರ. ಇಂತಹ ಯಾವುದೇ ಷಡ್ಯಂತರಗಳಿಗೆ ರಾಮ್ ಸೇನಾ ಸಂಘಟನೆಯು ಆಸ್ಪದ ಕೊಡುವುದಿಲ್ಲ’ಎಂದು ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ನಿಮ್ಮದೇ ರೀತಿಯಲ್ಲಿ ಉತ್ತರ ಕೊಡಲು ರಾಮಸೇನಾ ಸಂಘಟನೆಯು ಹಿಂದೂ ಸಮಾಜದ ಜೊತೆ ಯಾವಾಗಲೂ ಸಿದ್ದವಾಗಿರುತ್ತದೆ.
ಹಿಂದೂ ಸಮಾಜವು ಜಾಗೃತರಾಗಬೇಕಾದ ಸಂದರ್ಭ ಬಂದಿದೆ ಎಂದು ರಾಮ್ ಸೇನಾ ದ. ಕನ್ನಡ ಜಿಲ್ಲಾ ಅಧ್ಯಕ್ಷರು, ಕಿರಣ್ ಅಮೀನ್ ಉರ್ವಾಸ್ಟೋರ್ ಹೇಳಿದ್ದಾರೆ.

Leave A Reply

Your email address will not be published.