ವಿದ್ಯಾರ್ಥಿಗಳೇ ನಿಮಗಾಗಿ ಗುಡ್ ನ್ಯೂಸ್ : ಒನ್ ಕ್ಲಾಸ್ ಒನ್ ಚಾನಲ್ ಸಂಖ್ಯೆ 200ಕ್ಕೆ ಹೆಚ್ಚಳ | ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ವೊಂದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆಯಲ್ಲಿ ನೀಡಿದ್ದಾರೆ.

ಶಿಕ್ಷಣವನ್ನು ಡಿಜಿಟಲ್ ಮಾಡುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಒನ್ ಕ್ಲಾಸ್- ಒನ್ ಚಾನೆಲ್ ಘೋಷಣೆ ಮಾಡಲಾಗಿದೆ

ಒಂದರಿಂದ 12 ನೇ ತರಗತಿವರೆಗಿನ ಮಕ್ಕಳಿಗೆ ಚಾನೆಲ್ ಮೂಲಕ ಶಿಕ್ಷಣ ಒದಗಿಸುವುದು ಸರಕಾರದ ಉದ್ದೇಶ ಎಂದು ಹೇಳಿದರು. ವಿಶ್ವ ದರ್ಜೆಯ ಶಿಕ್ಷಣಕ್ಕೆ ಮಾನ್ಯತೆ ನೀಡಲಾಗುವುದು. ಇದುವರೆಗೆ ಕಡಿಮೆ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ಒನ್ ಕ್ಲಾಸ್ ಒನ್ ಟಿವಿ ಚಾನಲ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ.

ಈ ಚಾನಲ್ ಗಳನ್ನು 200 ಕ್ಕೆ ಹೆಚ್ಚಿಸುತ್ತಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

ಹಳ್ಳಿ ಶಾಲೆಗಳ ಮಕ್ಕಳ‌ ವಿದ್ಯಾಭ್ಯಾಸದ ದೃಷ್ಟಿಯಿಂದ ಒನ್ ಕ್ಲಾಸ್, ಒನ್ ಟಿವಿ ಚಾನಲ್ ಆರಂಭಿಸಲಾಗಿದೆ. ಕೊರೊನಾ ಕಾರಣದಿಂದ ಮಕ್ಕಳು ಮನೆಯಲ್ಲಿಯೇ ಇದ್ದಾರೆ. ವಿದ್ಯಾಭ್ಯಾಸದ ದೃಷ್ಟಿಯಿಂದ ಚಾನಲ್ ಗಳ ಸಂಖ್ಯೆಯನ್ನು ಪ್ರಧಾನ ಮಂತ್ರಿ ಇ ವಿದ್ಯಾ ಯೋಜನೆ ಅಡಿಯಲ್ಲಿ 200 ಕ್ಕೆ ಹೆಚ್ಚಳ ಮಾಡಲಾಗುತ್ತಿದೆ ಎಂದರು.

Leave A Reply

Your email address will not be published.