ದೇವರ ಕಾಣಿಕೆ ಹುಂಡಿ ಹಣ ಎಣಿಸುವಾಗ ಸಿಕ್ಕಿತೊಂದು ಭಕ್ತನ ಕೋರಿಕೆಯ ಪತ್ರ !! | ಆ ಪತ್ರದಲ್ಲಿ ಏನೇನೆಲ್ಲಾ ಬರೆದಿತ್ತು ಗೊತ್ತಾ??

ಕೊರೋನಾ ಸೋಂಕು ಹೆಚ್ಚಳವಾದರೂ ಕೂಡ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೇನೂ ಕಮ್ಮಿಯಾಗಿಲ್ಲ. ದೇವಳಗಳ ಬೊಕ್ಕಸಕ್ಕೆ ಯಾವುದೇ ರೀತಿಯ ‌ಕೊರತೆಯಾಗಿಲ್ಲ. ಅಂತೆಯೇ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಹುಂಡಿ ಹಣದ ಎಣಿಕೆ ಕಾರ್ಯ ನಡೆದಿದ್ದು, ಅಲ್ಲಿ ಸಿಕ್ಕಿದ ಪತ್ರವನ್ನು ಭಕ್ತಾದಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ.

 

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿರುವ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು. ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಹುಂಡಿ ಕಾಣಿಕೆ ಎಣಿಕೆ ನಡೆಸಲಾಯಿತು. ಆದರೆ ಎಣಿಕೆ ಕಾರ್ಯ ನಡೆಯುತ್ತಿರುವಾಗ‌ ಸಿಕ್ಕಿದ ಪತ್ರ ಮಾತ್ರ ಎಣಿಕೆ ಮಾಡುತ್ತಿದ್ದವರ ದೃಷ್ಟಿಯನ್ನು ತನ್ನತ್ತ ಹರಿಸಿಕೊಂಡಿದೆ.

ನನ್ನ ಪತ್ನಿಗೆ ಹೆಣ್ಣು ಮಗುವಾಗಲಿ, ಹೆರಿಗೆ ಸೂಸುತ್ರವಾಗಿ ಆಗಲಿ. ನನ್ನ ಮೇಲೆ ಯಾವುದೇ ಪ್ರಕರಣ ಇಲ್ಲದಂತೆ ಮಾಡು ಭಗವಂತ ಎಂಬ ಹಲವು ಹರಕೆಯಿರುವ ಭಕ್ತನೊಬ್ಬನ ಪತ್ರ ಹುಂಡಿಯಲ್ಲಿ ಸಿಕ್ಕಿದೆ. ಹುಂಡಿ ಎಣಿಕೆಯಲ್ಲಿ ಭಕ್ತನೊಬ್ಬನ ಹರಕೆ ಪತ್ರ ಓದಿದ ಕಂದಾಯ ಇಲಾಖೆ ಸಿಬ್ಬಂದಿ, ದೇವರೇ ಆ ಭಕ್ತನ ಬೇಡಿಕೆ ಈಡೇರಿಸಪ್ಪಾ ಎಂದು ನಗು ಬೀರಿದ್ದಾರೆ.

ಈ ಬಾರಿಯ ‌ಹುಂಡಿ ಹಣ ಎಣಿಕೆಯಲ್ಲಿ 10.45 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. 3 ವಿದೇಶಿ ನಾಣ್ಯಗಳು ಕೂಡ ಕಾಣಿಕೆಯಾಗಿ ಬಂದಿವೆ ಎಂದು ತಿಳಿದುಬಂದಿದೆ.

Leave A Reply

Your email address will not be published.