ಬೆಳ್ತಂಗಡಿ :ಅಳದಂಗಡಿ ಬಳಿ ಲಾರಿ ಹಾಗೂ ಲೇಯ್ ಲ್ಯಾಂಡ್ ವಾಹನದ ನಡುವೆ ಭೀಕರ ಅಪಘಾತ|ಓರ್ವರಿಗೆ ಗಂಭೀರ ಗಾಯ

Share the Article

ಬೆಳ್ತಂಗಡಿ :ಅಳದಂಗಡಿಯ ಕೆದ್ದು ತಿರುವಿನಲ್ಲಿ ಅಶೋಕ್ ಲೇಯ್ ಲ್ಯಾಂಡ್ ವಾಹನ ಹಾಗೂ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಲಾರಿ ನಡುವೆ
ಭೀಕರ ಅಪಘಾತ ಇಂದು ಮಧ್ಯಾಹ್ನ ನಡೆದಿದೆ.

ಮರದ ತುಂಡುಗಳನ್ನು ಸಾಗಿಸುತ್ತಿದ್ದ ಶ್ರೀ ಬನಶಂಕರಿ ಲಾರಿಯು ಬೆಳ್ತಂಗಡಿ ಕಡೆಯಿಂದ ಕಾರ್ಕಳ ಕಡೆಗೆ ಸಂಚರಿಸುತ್ತಿದ್ದ ವೇಳೆ,ಅಳದಂಗಡಿಯ ಕೆದ್ದು ತಿರುವು ಬಳಿ ಕಾರ್ಕಳ ಕಡೆಯಿಂದ ಬೆಳ್ತಂಗಡಿ ಕಡೆಗೆ ಸಂಚರಿಸುತ್ತಿದ್ದ ಚೈತನ್ಯ ಕೋಲ್ಡ್
ಸ್ಟೋರೇಜ್ ಪ್ರೈವೆಟ್ ಲಿಮಿಟೆಡ್ ಗೆ ಸೇರಿದ ಲೇಯ್ ಲಾಂಡ್ ವಾಹನ ಪರಸ್ಪರ ಡಿಕ್ಕಿಹೊಡೆದಿದೆ ಎನ್ನಲಾಗಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಲೇಯ್ ಲಾಂಡ್ ವಾಹನದ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಚಾಲಕನ ಕಾಲುಗಳಿಗೆ ಗಂಭೀರ ಗಾಯಗಳಾದೆ.ಚಿಕಿತ್ಸೆಗಾಗಿ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.

Leave A Reply