ಅರ್ಬಿ : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಾಕ್ಷ ಸಭಾಭವನ ಲೋಕಾರ್ಪಣೆ, ಅನ್ನಛತ್ರಕ್ಕೆ ಶಿಲಾನ್ಯಾಸ

Share the Article

ಕಡಬ : ಕುಂತೂರು ಗ್ರಾಮದ ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ,ವಾರ್ಷಿಕ ಬಲಿವಾಡು ಕೂಟ ಹಾಗೂ
ನೂತನ ನಿರ್ಮಾಣ ಗೊಳ್ಳಲಿರುವ ಅನ್ನಚತ್ರಕ್ಕೆ ಶಿಲಾನ್ಯಾಸ ಮತ್ತು ನೂತನ ನಿರ್ಮಾಣಗೊಂಡ ರುದ್ರಾಕ್ಷ ಸಭಾಭವನ ಲೋಕಾರ್ಪಣೆ ನಡೆಯಿತು.

ಹೊರನಾಡು ಡಾ. ಭೀಮೇಶ್ವರ ಜೋಷಿ ಯವರು ನೂತನ ನಿರ್ಮಾಣ ಗೊಳ್ಳಲಿರುವ ಅನ್ನಚತ್ರಕ್ಕೆ ಶಿಲಾನ್ಯಾಸ ಮತ್ತು ನೂತನ ನಿರ್ಮಾಣಗೊಂಡ ರುದ್ರಾಕ್ಷ ಸಭಾಭವನ ಲೋಕಾರ್ಪಣೆ ಮಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಸತೀಶ್ ಅವರು ಹೊರಾಂಗಣ ಹಾಸುಪದರವನ್ನು ಲೋಕಾರ್ಪಣೆ ಮಾಡಿದರು.

ಪೆರಾಬೆ ಗ್ರಾಮ ಪಂಚಾಯತು ಅಧ್ಯಕ್ಷರಾದ ಚಂದ್ರಶೇಖರ ರೈ ಅವರು ಅತಿಥಿಗೃಹ ವನ್ನು ಲೋಕಾರ್ಪಣೆ ಗೊಳಿಸಿದರು.

ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣ ಕುಮಾರ್ ಅತ್ರಿಜಾಲು ನೂತನವಾಗಿ ನಿರ್ಮಾಣಗೊಳ್ಳುವ ಅನ್ನ ಛತ್ರ ದ ಬಗ್ಗೆ ವಿವರಣೆ ನೀಡಿದರು.

ಕಾರ್ಯದರ್ಶಿ ಪ್ರವೀಣ ಆಳ್ವ ಅವರಿಂದ ಸ್ವಾಗತಿಸಿದರು, ಉಪಾಧ್ಯಕ್ಷ ಸುಬ್ರಹ್ನಣ್ಯ ಗೌಡ ಅವರು ವಂದಿಸಿದರು

Leave A Reply