ಕೇವಲ ಹತ್ತು ನಿಮಿಷದಲ್ಲಿ ‘ಥಾಲಿ’ ಊಟವನ್ನು ಮುಗಿಸಿ ಚಾಲೆಂಜ್ ಗೆದ್ದ ಫುಡ್ ಬ್ಲಾಗರ್ |5 ಸಾವಿರ ಬಹುಮಾನ ಗೆದ್ದ ಬಳಿಕ ಆತ ಮಾಡಿದ್ದೇನು ಗೊತ್ತಾ?

ಚಾಲೆಂಜ್ ಅನ್ನೋದು ಇತ್ತೀಚೆಗೆ ಕಾಮನ್ ಆಗಿದೆ. ಅದೇ ರೀತಿಲಿ ಫುಡ್ ಪ್ರೀಯರು ನೀವೂ ಕೂಡ ಅಲ್ವಾ?ಸಾಮಾನ್ಯವಾಗಿ ಟೈಮಿಂಗ್ಸ್ ಫಿಕ್ಸ್ ಮಾಡಿ ಈ ಆಹಾರವನ್ನು ತಿನ್ನಬೇಕು ಎಂದು ಆಡಿದವರಲ್ಲಿ ನೀವೂ ಕೂಡ ಒಬ್ಬರಿರೋದು ಖಂಡಿತ. ಅದೇ ರೀತಿ ಇಲ್ಲೊಬ್ಬ ಫುಡ್ ಬ್ಲಾಗರ್ ಊಟ ತಿನ್ನೋದ್ರಲ್ಲಿ ಚಾಲೆಂಜ್ ಮಾಡಿದ್ದು, ಅದನ್ನ ಗೆದ್ದು ಹಣ ಕೂಡ ಪಡೆದಿದ್ದಾನೆ. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ.

ಹೌದು.ಈ ಫುಡ್ ಬ್ಲಾಗರ್ ರಾಜಸ್ಥಾನ ಥಾಲಿ ಊಟವನ್ನು 10 ನಿಮಿಷದಲ್ಲಿ ತಿಂದು ಮುಗಿಸಿ 5,100 ರೂ ಬಹುಮಾನ ಗೆದ್ದಿದ್ದಾರೆ.ಇಷ್ಟು ದಿನ ಹೊಸ ಹೊಸ ರುಚಿಯ ತಿನಿಸನ್ನು ತಿಂದು ಫುಡ್​ ಬ್ಲಾಗರ್​ಗಳು ನೆಟ್ಟಿಗರಿಗೆ ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿತ್ತು.ದೆಹಲಿ ಯ ‘ಚಾಪ್​ ಪ್ಯಾಕ್ಟರಿ’ ಎನ್ನುವ ಹೊಟೇಲನಲ್ಲಿ ವಿಡಿಯೋವನ್ನು ಶೂಟ್​ ಮಾಡಲಾಗಿದ್ದು,ಈ ವಿಡಿಯೊವನ್ನು ಲೈವ್​ ಲಿಮಿಟ್​ಲೆಸ್​ ಎನ್ನುವ ಪೇಸ್ಬುಕ್​ ಖಾತೆ ಹಂಚಿಕೊಂಡಿದೆ.

ವಿಡಿಯೋದಲ್ಲಿ ಸ್ಪರ್ಧೆಯನ್ನು ವಿವರಿಸಲಾಗಿದ್ದು,ಸಸ್ಯಾಹಾರಿ ಹೊಟೇಲ್​ನಲ್ಲಿ 499 ರೂಗಳ ಥಾಲಿಯನ್ನು ನೀಡಿ ಅದನ್ನು 10 ನಿಮಿಷದಲ್ಲಿ ತಿಂದು ಮುಗಿಸಿದವರೆಗೆ ಬಹುಮಾನವನ್ನು ನೀಡುವುದಾಗಿ ಘೋಷಿಸಲಾಗಿತ್ತು. ಥಾಲಿಯಲ್ಲಿ ಬೆಣ್ಣೆ ಸವರಿದ ಬಾಹುಬಲಿ ನಾನ್​ ಅನ್ನು ನೀಡಲಾಗಿತ್ತು. ಇದರಲ್ಲಿ ರುಮಾಲ್​ ರೋಟಿ, ವೆಜಿಟೇರಿಯನ್​ ಚಾಪ್​, ದಾಲ್​ ಮತ್ತು ಪನ್ನೀರ್​ಅನ್ನು ನೀಡಲಾಗಿತ್ತು. ವ್ಯಕ್ತಿಯೊಬ್ಬ ಈ ಚಾಲೆಂಜ್​ ಅನ್ನು ಸ್ವೀಕರಿಸಿ 10 ನಿಮಿಷದಲ್ಲಿ ಥಾಲಿಯನ್ನು ಸಂಪೂರ್ಣವಾಗಿ ತಿಂದು ಮುಗಿಸಿ 5,100ರೂ ಬಹುಮಾನ ಗೆದ್ದಿದ್ದನು.

ಆದ್ರೆ ಬಳಿಕ ಆತ ಮಾಡಿದ ಕೆಲಸ ಮಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಹೌದು, ಥಾಲಿಯನ್ನು ತಿಂದ ಬಳಿಕ ಆತ ಬಹುಮಾನವಾಗಿ ಗೆದ್ದ ಹಣವನ್ನು ಅದೇ ಅಂಗಡಿಯ ಮಾಲೀಕನಿಗೆ ವಾಪಸ್​ ನೀಡಿದ್ದಾನೆ. ತಿನಿಸು ರುಚಿಕರವಾಗಿತ್ತು ಎಂದು ಆತ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜ.11ರಂದು ವಿಡಿಯೋ ಹಂಚಕೊಳ್ಳಲಾಗಿದ್ದು ಈವರೆಗೆ 3.2 ಮಿಲಿಯನ್​ ವೀಕ್ಷಣೆ ಪಡೆದಿದೆ. ವ್ಯಕ್ತಿಯು ಹಣವನ್ನು ಹಿಂದಿರುಗಿಸಿದ್ದನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಪರ್ಧೆಯನ್ನು ಗೆದ್ದಿದ್ದಕ್ಕೆ ಅಭಿನಂದಿಸಿದ್ದಾರೆ.

Leave A Reply

Your email address will not be published.