ವಿಶೇಷ ಮಾಹಿತಿ : ಈ ರಾಜ್ಯದ ಊರಿನ ಜನರಿಗೆ ಒಂದೇ ಹೆಸರಂತೆ | ಗಂಡಾಗಲಿ, ಹೆಣ್ಣಾಗಲಿ ಒಂದೇ ಹೆಸರು|ಈ ಹೆಸರಿನ ಹಿಂದಿರುವ ಇತಿಹಾಸ??
ಇಲ್ಲೊಂದು ಗ್ರಾಮವಿದೆ. ಇಲ್ಲಿಯ ವಿಶೇಷತೆ ಏನೆಂದರೆ ಇಲ್ಲಿ ಹುಟ್ಟುವ ಪ್ರತಿಯೊಂದು ಮಕ್ಕಳಿಗೂ ಒಂದೇ ಹೆಸರಿಡುತ್ತಾರೆ ಎಂದರೆ ನೀವು ನಂಬುತ್ತೀರಾ ? ಈ ಗ್ರಾಮದಲ್ಲಿ ಹುಟ್ಟುವ ಒಂದೇ ಹೆಸರಿಡಲು ಕಾರಣವೇನು ? ಬನ್ನಿ ತಿಳಿಯೋಣ!!!
ಈ ಸ್ಥಳ ಇರುವುದು ಕರ್ನಾಟಕದ ಬಾದಾಮಿ ತಾಲೂಕಿನ ಹುಲ್ಲಿಕೆರೆ ಇನಾಮು ಗ್ರಾಮ. ಈ ಗ್ರಾಮದ ದೇವತೆ ಗದ್ದೆಮ್ಮ ದೇವಿ. ಒಟ್ಟಾಗಿ ಈ ಗ್ರಾಮದಲ್ಲಿ 500 ಕ್ಕೂ ಹೆಚ್ಚು ಮನೆಗಳು ಇದ್ದು ಸುಮಾರು 2000 ಜನರು ಇಲ್ಲಿ ವಾಸ ಮಾಡುತ್ತಿದ್ದಾರೆ. ಈ ಗ್ರಾಮದಲ್ಲಿ ಗಂಡು ಹೆಣ್ಣು ಮಕ್ಕಳಿಗೆ ಕೂಡಾ ಇದೇ ಹೆಸರನ್ನು ಇಡಲಾಗುತ್ತದೆ. ಗಂಡು ಮಕ್ಕಳಿಗೆ ಗದ್ದೆಪ್ಪ ಎಂದು , ಹೆಣ್ಣು ಮಕ್ಕಳು ಹುಟ್ಟಿದರೆ ಗದ್ದೆಮ್ಮ ಎಂದು.
ಎಲ್ಲರಿಗೂ ಒಂದೆ ಹೆಸರಿಡಲು ಮೂಲ ಕಾರಣ ಇವರು ನಂಬಿಕೊಂಡು ಬಂದಿರುವ ಪದ್ಧತಿ.
ಅಷ್ಟು ಮಾತ್ರವಲ್ಲದೇ, ಈ ಗ್ರಾಮಕ್ಕೆ ಸೊಸೆಯಾಗಿ ಬರುವವರಿಗೂ ಗದ್ದೆಮ್ಮ ಎಂದೇ ಹೆಸರನ್ನು ಇಡುತ್ತಾರೆ. ಹೌದು, ಈ ಗ್ರಾಮದ ದೇವತೆಯ ಹೆಸರು ಗದ್ದೆಮ್ಮ. ಈ ದೇವಿಯ ಹೆಸರನ್ನು ಇಡದೇ ಇದ್ದರೆ ಗದ್ದೆಮ್ಮ ತನ್ನ ಮನೆತನವನ್ನು ಕಾಡುತ್ತಾಳೆ ಎಂಬುವುದು ಇವರ ನಂಬಿಕೆ. ಮಕ್ಕಳಾಗದೆ ಇರುವವರು ಕೂಡಾ ಇಲ್ಲಿಗೆ ಬಂದು ದೇವಿಯ ಹತ್ತಿರ ಕೇಳಿಕೊಂಡರೆ ಮಕ್ಕಳು ಆಗುತ್ತದೆಯಂತೆ. ಆಧುನಿಕತೆ ಇರುವ ಈ ಕಾಲದಲ್ಲಿ ಇಂತಹ ಒಂದು ಗ್ರಾಮವಿದೆ ಎಂದರೆ ಮತ್ತೊಂದು ಆಶ್ಚರ್ಯಕರ ವಿಷಯ ಇದಾಗಿದೆ. ಇಂತಹ ಆಚರಣೆ ಪ್ರಪಂಚದಲ್ಲೇ ಇಲ್ಲ ಎಂದು ಹೇಳಬಹುದು. ಇಂತಹ ಒಂದು ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುವುದು ಅಷ್ಟೊಂದು ಸುಲಭದ ಮಾತಲ್ಲ. ಪ್ರಪಂಚ ಎಷ್ಟೇ ಮುಂದುವರಿದಿದ್ದರೂ ಇಲ್ಲಿನ ಜನ ಮಾತ್ರ ಇದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ಗ್ರಾಮದ ಜನರು ಈ ದೇವಿಯ ಬಗ್ಗೆ ಇಷ್ಟೊಂದು ನಂಬಿಕೆ ಇಟ್ಟಿದ್ದಾರೆ ಅಂದರೆ ಅವರ ಆ ನಂಬಿಕೆಯಲ್ಲಿ ಸತ್ಯ ಇದೆ ಎಂದರ್ಥ.