ಈ ಪ್ರಸಿದ್ಧ ದೇವಾಲಯದಲ್ಲಿ ಬ್ರಾಹ್ಮಣರು ಪ್ರಸಾದ ತಯಾರಿಸುವ ನಿಯಮವನ್ನು ಕೈ ಬಿಟ್ಟ ಮಂಡಳಿ!!

Share the Article

ಫೆ.14 ರಿಂದ 23 ರವರೆಗೆ ಕೇರಳದ ಗುರುವಾಯೂರು ದೇಗುಲದಲ್ಲಿ ಉತ್ಸವ ಜರುಗಲಿದೆ. ಈ ಉತ್ಸವಕ್ಕೆ ಬ್ರಾಹ್ಮಣರೇ ಪ್ರಸಾದ ತಯಾರಿಸಿ, ಊಟ ಬಡಿಸಬೇಕೆಂದು ಮಂಡಳಿ ಆದೇಶ ನೀಡಿತ್ತು. ಅದಕ್ಕೆ ಟೆಂಡರ್ ಕೂಡಾ ಕರೆಯಲಾಗಿತ್ತು. ಈ ವಿಚಾರಕ್ಕೆ ವಿರೋಧ ವ್ಯಕ್ತ ಕೂಡ ಆಗಿತ್ತು. ಈಗ ಪ್ರಸಾದ ತಯಾರಿಕೆ ಮತ್ತು ಬಡಿಸುವ ವಿಚಾರದಲ್ಲಿ ಭುಗಿಲೆದ್ದಿದ್ದ ಜಾತಿ ವಿವಾದಕ್ಕೆ ತೆರೆ ಬಿದ್ದಿದೆ. ಪ್ರಸಾದವನ್ನು ಬ್ರಾಹ್ಮಣರೇ ತಯಾರಿಸಬೇಕೆಂಬ ನಿಯಮವನ್ನು ದೇಗುಲದ ಮಂಡಳಿ ಕೈ ಬಿಟ್ಟಿದೆ.

ಹೌದು. ಕೇರಳದ ಪ್ರಸಿದ್ಧ ದೇಗುಲವಾದ ಗುರುವಾಯೂರು ಉತ್ಸವದಲ್ಲಿ ಬ್ರಾಹ್ಮಣರೇ ಪ್ರಸಾದ ತಯಾರಿಸಬೇಕೆಂಬ ನಿಯಮವನ್ನು ಕೈ ಬಿಡುವಂತೆ ಸೂಚಿಸಿದ್ದಾರೆ.

ಇದರ ಬೆನ್ನಲ್ಲೇ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಉತ್ಸವ ಮಾಡದೆ, ಸರಳವಾಗಿ ಉತ್ಸವ ಮಾಡುವುದು ಕೂಡಾ ಆಗಿದೆ. ಊಟ ಬಡಿಸುವ ಬದಲಾಗಿ 30000 ಜನರಿಗೆ ಪ್ರಸಾದದ ಕಿಟ್ ಕೊಡಲಾಗುವುದು ಎಂದು ದೇಗುಲದ ಮಂಡಳಿ ಮಾಹಿತಿ ಕೊಟ್ಟಿದೆ.

Leave A Reply