ಶ್ರೀಮಂತಿಕೆಯ ದರ್ಪ ಬೀದಿ ನಾಯಿಯನ್ನೇ ಕೊಲ್ಲೋ ಮಟ್ಟಿಗೆ|ಉದ್ದೇಶಪೂರ್ವಕವಾಗಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ ಉದ್ಯಮಿಯ ಮೊಮ್ಮಗ

ಬೆಂಗಳೂರು:ಮೂಕ ಪ್ರಾಣಿಗಳನ್ನು ಕಂಡೊಡನೆ ವಾಹನದ ಅಡಿಗೆ ಬೀಳೋದನ್ನು ತಪ್ಪಿಸಲು ಹೋಗಿ, ಅಪಘಾತ ಮಾಡಿಕೊಂಡೋರು ಅದೆಷ್ಟೋ ಮಂದಿ. ಆದರೆ ಇಲ್ಲೊಬ್ಬನ ಶ್ರೀಮಂತಿಕೆಯ ದರ್ಪ ಕರನ್ನೇ ನಾಯಿಯ ಮೇಲೆ ಹತ್ತಿಸುವಷ್ಟು ಬೆಳೆದಿದೆ ಎಂದರೆ ತಪ್ಪಲ್ಲ.

ದಿವಂಗತ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗನ ಉದ್ದೇಶಪೂರ್ವಕವಾಗಿ ಬೀದಿನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆಯಲಾಗಿತ್ತು ಎಂದು ಆರೋಪಿಸಲಾಗಿದ್ದು,ಘಟನೆಯ ವಿರುದ್ಧ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ರಾಜಧಾನಿ ಬೆಂಗಳೂರಿನ ಜಯನಗರ 1ನೇ ಬ್ಲಾಕ್​ 10ನೇ ಬಿ ಮುಖ್ಯರಸ್ತೆಯಲ್ಲಿ ಈ ಪ್ರಕರಣ ಜ. 26ರ ಸಂಜೆ ಸುಮಾರಿಗೆ ನಡೆದಿದೆ. ಕಾರು ಹತ್ತಿಸಿದ್ದರಿಂದ ವಿಲವಿಲ ಒದ್ದಾಡಿ ಬೀದಿನಾಯಿ ಪ್ರಾಣಬಿಟ್ಟಿತ್ತು. ಆದಿಕೇಶವುಲು ನಾಯ್ಡು ಮೊಮ್ಮಗನ ವಿಕೃತಿ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಬದ್ರಿ ಎಂಬುವವರು ನೀಡಿದ ದೂರಿನನ್ವಯ ಮೊಕದ್ದಮೆ ದಾಖಲು ಮಾಡಲಾಗಿದೆ.

ಕೆಎ 51 ಎಂಇ 0045 ನೋಂದಣಿ ಸಂಖ್ಯೆಯ ಆಡಿ ಕಾರನ್ನು ಚಲಾಯಿಸಿಕೊಂಡು ಬಂದ ಆದಿಕೇಶವನಾಯ್ಡು ಎಂಬಾತ, ರಸ್ತೆ ಪಕ್ಕ ಮಲಗಿದ್ದ ಬೀದಿನಾಯಿ ಮೇಲೆ ಬೇಕಂತಲೆ ಕಾರು ಹತ್ತಿಸಿಕೊಂಡು ಹೋಗಿದ್ದಾನೆ. ವಿಲವಿಲ ಒದ್ದಾಡುತ್ತಿದ್ದ ನಾಯಿಗೆ ಚಿಕಿತ್ಸೆ ನೀಡಲು ಹುಡುಕಾಡಿದರೂ ಅದು ಪತ್ತೆಯಾಗಿಲ್ಲ. ಈ ಕಾರು ವಿಷ್ಣು ಎಂಬವರಿಗೆ ಸೇರಿದ್ದು, ದುಷ್ಕೃತ್ಯ ಎಸಗಿದ ವ್ಯಕ್ತಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Leave A Reply

Your email address will not be published.