ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿ,ಪತ್ರಿಯೊಬ್ಬರೂ ಹೆಜ್ಜೆ ಹಾಕುವಂತೆ ಮಾಡಿದ ‘ಕಚ್ಚಾ ಬಾದಾಮ್ ‘ಹಾಡಿನ ಹಿಂದಿರುವ ಧ್ವನಿ ಯಾರದ್ದು ಗೊತ್ತೇ!?|ಇಲ್ಲಿದೆ ನೋಡಿ ಇವರ ಪರಿಚಯ

ಅದೆಷ್ಟೋ ಮಂದಿ ಸಂದರ್ಭಕ್ಕೆ ತಕ್ಕಂತೆ ಹಾಡೋ ಅದೆಷ್ಟೋ ಹಾಡುಗಳು ಅವರಿಗೆ ಅರಿವೇ ಇಲ್ಲದಂತೆ ಫೇಮಸ್ ಆಗಿವೆ.ಇದೇ ರೀತಿ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಹಾಡು ಸಖತ್ ಫೇಮಸ್​ ಆಗಿದ್ದು,ಪ್ರತಿಯೊಬ್ಬರ ಸ್ಟೇಟಸ್ ನಿಂದ ಹಿಡಿದು ಇನ್ಸ್ಟಾಗ್ರಾಮ್ ರೀಲ್ಸ್ ವರೆಗೂ ಹೆಸರುವಾಸಿಯಾಗಿದೆ.

ಪತ್ರಿಯೊಬ್ಬರು ಹಾಡಿಗೆ ಹೆಜ್ಜೆ ಹಾಕಿ,ಸಾಮಾಜಿಕ ಮಾಧ್ಯಮದಲ್ಲಿ ಧೂಳೆಬ್ಬಿಸಿರೋ ಹಾಡೇ ‘ಕಚ್ಚಾ ಬಾದಾಮ್’ . ಸದ್ಯ ಈ ಹಾಡು ಟ್ರೆಂಡ್​ಗಳ ಪಟ್ಟಿಗೆ ಸೇರಿಕೊಂಡಿದ್ದು,ಆ ಹಾಡಿನ ಹಿಂದಿರುವ ಧ್ವನಿ ಯಾರದ್ದು ಎಂಬ ಮಾಹಿತಿ ನಾವು ಹೇಳ್ತಿವಿ ನೋಡಿ.ಹೌದು ವೈರಲ್ ಆಗಿರುವ ಕಚ್ಚಾ ಬಾದಾಮ್ ಹಾಡಿನ ಹಿಂದಿನ ವ್ಯಕ್ತಿ ಭುವನ್ ಬದ್ಯಕರ್.

ಭುವನ್ ಬದ್ಯಕರ್ ಅವರ ಪರಿಚಯ:

ಭುವನ್ ಬದ್ಯಕರ್ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಲಕ್ಷ್ಮೀನಾರಾಯಣಪುರ ಪಂಚಾಯತ್‌ನ ಕುರಲ್ಜುರಿ ಗ್ರಾಮದ ದುಬ್ರಾಜ್‌ಪುರ ಬ್ಲಾಕ್‌ನ ನಿವಾಸಿ. ಕಡಲೆಕಾಯಿ ಮಾರಾಟ ಮಾಡುವ ಈ ವ್ಯಕ್ತಿ ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬಳು ಪುತ್ರಿಯನ್ನು ಹೊಂದಿರುವ ಕುಟುಂಬ ಇವರದು. ಪ್ರತಿನಿತ್ಯ ಕಡಲೆಕಾಯಿ ಮಾರಲು ದೂರದ ಹಳ್ಳಿಗಳಿಗೆ ಸೈಕಲ್ ತೆಗೆದುಕೊಂಡು ಹೋಗುತ್ತಾರೆ. ಪ್ರತಿ ದಿನ 3- 4 ಕೆಜಿ ಕಡಲೆಕಾಯಿ ಮಾರಾಟ ಮಾಡಿ 200-250 ರೂ. ಸಂಪಾದಿಸುತ್ತಾರೆ. ಆದರೆ, ಕಚ್ಚಾ ಬಾದಾಮ್​ ಹಾಡಿನಿಂದ ಖ್ಯಾತಿ ಪಡೆದ ನಂತರ, ಅವರು ಸಾಮಾನ್ಯಕ್ಕಿಂತ ಹೆಚ್ಚು ಕಡಲೆಕಾಯಿಯನ್ನು ಮಾರಾಟ ಮಾಡುತ್ತಿದ್ದಾರಂತೆ.

ಇನ್ನೂ ಭುವನ್ ಬದ್ಯಕರ್ ಅವರ ಆರ್ಥಿಕ ಪರಿಸ್ಥಿತಿ ಅಷ್ಟೋಂದು ಅನುಕೂಲಕರವಾಗಿಲ್ಲ. ಆಜ್‌ತಕ್‌ ಚಾನೆಲ್​ಗೆ ನೀಡಿದ ಸಂದರ್ಶನದ ಪ್ರಕಾರ, ಭುವನ್ ತಾನು ವಾಸಿಸುವ ಪ್ರದೇಶವನ್ನು ತೋರಿಸಿದ್ದಾರೆ. “ನನ್ನ ಹಾಡಿನ ಬಗ್ಗೆ ಜನರು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ ಮತ್ತು ನನ್ನ ಕುಟುಂಬಕ್ಕೆ ಕೆಲವು ಶಾಶ್ವತ ಜೀವನ ವ್ಯವಸ್ಥೆಗಳನ್ನು ಮಾಡಲು ಸರ್ಕಾರವು ಸ್ವಲ್ಪ ಹಣವನ್ನು ಸಹಾಯ ಮಾಡಬೇಕೆಂದು ನಾನು ಬಯಸುತ್ತೇನೆ. ನನ್ನ ಕುಟುಂಬಕ್ಕೆ ನಾನು ಉತ್ತಮ ಆಹಾರ ಮತ್ತು ಧರಿಸಲು ಉತ್ತಮ ಬಟ್ಟೆಗಳನ್ನು ನೀಡಲು ಬಯಸುತ್ತೇನೆ ಎಂದು ಭುವನ್ ಆಜ್‌ತಕ್‌ಗೆ ಹೇಳಿಕೊಂಡಿದ್ದಾರೆ.

ಸುಮಾರು 10 ವರ್ಷಗಳಿಂದ ಕಡಲೆಕಾಯಿಯನ್ನು ಮಾರಾಟ ಮಾಡುತ್ತಿರುವ ಭುವನ್, ಹಾಡುಗಳನ್ನು ಹಾಡುವುದು ಮತ್ತು ಬರೆಯುವುದು ಅವರ ಹವ್ಯಾಸಗಳಲ್ಲಿ ಒಂದು ಎಂದ್ದಿದ್ದಾರೆ. ಜನಪ್ರಿಯ ಬೌಲ್ ಜಾನಪದ ರಾಗವನ್ನು ಆಧರಿಸಿ ಕಚ್ಚಾ ಬಾದಾಮ್ ಹಾಡನ್ನು ರಚಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನನ್ನ ಹಾಡು ಹೇಗೆ ವೈರಲ್ ಆಯಿತು ಎಂದು ನನಗೆ ಗೊತ್ತಿಲ್ಲ. ಬಹುಶಃ ನಾನು ಬಿದಿಯಲ್ಲಿ ಹಾಡುವಾಗ ಅದನ್ನು ಯಾರೋ ರೆಕಾರ್ಡ್​ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರಬಹುದು ಎಂದು ಅವರು ಹೇಳಿದ್ದಾರೆ.ಒಟ್ಟಾರೆ ಕಚ್ಚಾ ಬಾದಾಮ್ ಫುಲ್ ಫೇಮಸ್..

Leave A Reply

Your email address will not be published.