ನಟಿ ಸಾಯಿ ಪಲ್ಲವಿ ಬಾಡಿಶೇಮಿಂಗ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ ಮಹಿಳಾ ರಾಜ್ಯಪಾಲೆ!

ಒಂದು ಹೆಣ್ಣಿನ ಬಾಡಿಶೇಮಿಂಗ್ ಮಾಡುವುದು ಇತ್ತೀಚೆಗೆ ಎಲ್ಲರಿಗೂ ಸಾಮಾನ್ಯವಾಗಿ ಹೋಗಿಬಿಟ್ಟಿದೆ. ಇದಕ್ಕೆ ಸಿನಿಮಾ ನಟ ನಟಿಯರು ಕೂಡಾ ಹೊರತಾಗಿಲ್ಲ. ಈ ಪಾಲಿಗೆ ಸಾಯಿ ಪಲ್ಲವಿಯನ್ನು ಕೂಡಾ ಸೇರಿಸಿದ್ದಾರೆ ಟ್ರೋಲರ್ಸ್ ಗಳು. ನೈಸರ್ಗಿಕ ಸೌಂದರ್ಯ, ಅದ್ಭುತ ನಟನೆ, ಡ್ಯಾನ್ಸ್ ಪ್ರತಿಭೆ ಹೊಂದಿರುವ ಹೊಂದಿರುವ ಸಾಯಿ ಪಲ್ಲವಿ ಈ ಹಿಂದೆ ರೌಡಿ ಬೇಬಿ ಸಿನಿಮಾದಲ್ಲಿ ಧನುಷ್ ಗೆ ಸರಿಸಮಾನವಾಗಿ ನಟಿಸಿ ಗೆದ್ದಿದ್ದಾರೆ. ಆದರೂ ಈಕೆಯನ್ನು ಆಗಾಗ್ಗೆ ಹೀಯಾಳಿಸುವ ಮಂದಿಗೇನೂ ಕಮ್ಮಿ ಇಲ್ಲ. ಕೆನ್ನೆಯ ಮೇಲೆ ಮೊಡವೆ ಇದೆ ಮೇಕಪ್ ನಲ್ಲಿ ಮುಚ್ಚಲು ಆಕೆಯು ಬಿಡಲ್ಲ ಎಂಬ ಬಗ್ಗೆ ಭಾರೀ ಚರ್ಚೆಯಾಗಿತ್ತು. ಅದಕ್ಕೆ ಸಾಯಿ ಪಲ್ಲವಿ ಖಡಕ್ ಆಗಿ ಉತ್ತರ ಕೂಡಾ ಕೊಟ್ಟಿದ್ದಾರೆ ಕೂಡಾ.

ಆದರೆ ಈಗ ಸುದ್ದಿಯಾಗಿರುವುದು ಮಾತ್ರ ಶ್ಯಾಮ್ ಸಿಂಗ್ ರಾಯ್ ಸಿನಿಮಾದ ನಟನೆಗೆ. ಇಲ್ಲಿ ನಾನಿ ಜೊತೆ ಸಾಯಿ ಪಲ್ಲವಿ ನಟಿಸಿದ್ದಾರೆ. ಆದರೂ ಈಕೆಯ ಬಾಡಿಶೇಮಿಂಗ್ ಬಗ್ಗೆ‌ ಟ್ರೋಲ್ ಶುರುವಾಗಿದೆ. ಸಿನಿಮಾದಲ್ಲಿ ಚೆನ್ನಾಗಿ ಕಾಣಿಸುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ. ಇದಕ್ಕೆ ಈ ಬಾರಿ ನಟಿ ಸಾಯಿ ಪಲ್ಲವಿ ತಿರುಗೇಟು ಕೊಟ್ಟಿಲ್ಲ. ಇದಕ್ಕೆ ಬಿಜೆಪಿಯ ಮಾಜಿ ನಾಯಕಿ ಹಾಗೂ ತೆಲಂಗಾಣದ ರಾಜ್ಯಪಾಲೆ ಡಾ.ತಮಿಳಿಸಾಯಿ ಸೌಂದರರಾಜನ್ ಅವರು ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

” ಈ ತರಹ ಒಂದು ಹೆಣ್ಣಿನ ದೇಹ ಹಾಗೂ ಅವಳು ಕಾಣುವ ರೀತಿಗಳನ್ನು ಹೀಯಾಳಿಸುವುದು ಬಹಳ ದೊಡ್ಡ ತಪ್ಪು. ಇದನ್ನು ಅನುಭವಿಸಿದವರಿಗೆ ಮಾತ್ರವೇ ಅದರ ನೋವು ಎಷ್ಟೆಂದು ಗೊತ್ತಿರುತ್ತದೆ. ಇಂತಹದ್ದನ್ನು ನಾನು ಕೂಡಾ ಅನುಭವಿಸಿದ್ದೇನೆ. ಕೆಲಸದ ಶ್ರಮ ನನ್ನನ್ನು ಇಲ್ಲಿತನಕ ತಂದು ನಿಲ್ಲಿಸಿದೆ. ದೇಹದ ರಚನೆ, ಮುಖದ ಸೌಂದರ್ಯದ ಬಗ್ಗೆ ಟೀಕೆ ಮಾಡುವವರಿಗೆ ಮಹಿಳೆಯರು ಸೊಪ್ಪು ಹಾಕಬಾರದು‌. ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬಾರದು‌. ನಮ್ಮ ಬುದ್ಧಿಶಕ್ತಿ, ಕೌಶಲ್ಯ ಸಾಮಾಜಿಕವಾಗಿ ಬೆಲೆಬಾಳುವಂಥದ್ದು. ಟ್ರೋಲರ್ಸ್ ಗಳನ್ನು ಕಡೆಗಣಿಸಬೇಕು” ಎಂದು ಮಹಿಳೆಯರಿಗೆ ಆತ್ಮಸ್ಥೈರ್ಯದ ಮಾತುಗಳನ್ನು ಮಾಧ್ಯಮ ಮುಂದೆ ಹೇಳಿದ್ದಾರೆ. ಹಾಗೂ ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ ಕೂಡಾ.

Leave A Reply

Your email address will not be published.