ಬಂಟ್ವಾಳ:ಆಟೋ ಗ್ಯಾಸ್ ಸಿಲಿಂಡರ್ ಸ್ಫೋಟ|ಆಟೋ ರಿಕ್ಷಾ ಸುಟ್ಟು ಭಸ್ಮ

ಬಂಟ್ವಾಳ: ಆಟೋ ಗ್ಯಾಸ್ ಸಿಲಿಂಡರ್ ಅನ್ನು
ಕತ್ತರಿಸುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡು ಆಟೋ ಉರಿದು ಭಸ್ಮವಾಗಿದ್ದು,ವ್ಯಕ್ತಿಯೊಬ್ಬರಿಗೆ ಗಾಯಗಳಾಗಿರುವ ಘಟನೆ
ಫರಂಗಿಪೇಟೆ ಸಮೀಪದ ಅಮ್ಮೆಮಾರ್ ಎಂಬಲ್ಲಿ
ನಿನ್ನೆ ಸಂಜೆ ನಡೆದಿದೆ.

 

ಬಂಟ್ವಾಳ ಕಾರಾಜೆ ನಿವಾಸಿ ಅಬ್ದುಲ್ ರಝಾಕ್
(62) ಗಾಯಗೊಂಡವರು.

ಗುಜರಿ ವ್ಯಾಪಾರಿಯಾದ ಅಮ್ಮೆಮಾರ್ ನಿವಾಸಿ
ತಸ್ಲಿಮ್ ಎಂಬವರ ಮನೆಯಲ್ಲಿ ಗುಜರಿಗೆ ಬಂದಿದ್ದ
ಆಟೋ ಗ್ಯಾಸ್ ಸಿಲಿಂಡರ್ ಕತ್ತರಿಸಲು ಆಟೋ ರಿಕ್ಷಾದಲ್ಲಿ ಅಬ್ದುಲ್ ರಝಾಕ್ ಬಂದಿದ್ದು,
ಸಿಲಿಂಡರ್ ಕತ್ತರಿಸುತ್ತಿದ್ದ ವೇಳೆ ಸಿಲಿಂಡರ್
ಸ್ಫೋಟಗೊಂಡಿದೆ ಎನ್ನಲಾಗಿದೆ.

ಘಟನೆಯಿಂದ ಸಿಲಿಂಡರ್ ಕತ್ತರಿಸುತ್ತಿದ್ದ ಅಬ್ದುಲ್
ರಝಾಕ್ ತುಂಬೆ ಖಾಸಗಿ ಆಸ್ಪತ್ರೆಗೆ
ದಾಖಲಿಸಲಾಗಿದೆ. ಅವರು ಬಂದಿದ್ದ ಆಟೋ ರಿಕ್ಷಾ
ಭಸ್ಮವಾಗಿದ್ದು ಸಮೀಪದ ಮನೆಗಳ ಗೋಡೆಗಳು
ಬಿರುಕು ಬಿಟ್ಟಿದೆ. ಅಗ್ನಿಶಾಮಕದಳದ ಸಿಬ್ಬಂದಿಗಳು
ಭೇಟಿ ನೀಡಿದ್ದಾರೆ.

Leave A Reply

Your email address will not be published.