ಜೋಡಿ ಕೊಲೆ ಆರೋಪಿಗೆ ಮಾರಕ ಚುಚ್ಚುಮದ್ದಿನ ಮೂಲಕ ಮರಣದಂಡನೆ | ಈತ ಗೆಳತಿಗೆ ಜಾಮೀನಿಗೆ ಹಣ ಹೊಂದಿಸಲು ದರೋಡೆಗೈದು ಕೊಲೆ ಮಾಡಿದ್ದ
ಅಮೇರಿಕ : ಜೋಡಿ ಕೊಲೆ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಓಕ್ಲಹೋಮಾದಲ್ಲಿ ಗುರುವಾರ ಮಾರಕ ಚುಚ್ಚುಮದ್ದಿನ ಮೂಲಕ ಮರಣದಂಡನೆ ನೀಡಲು ನಿರ್ಧರಿಸಲಾಗಿದೆ.
ಈ ವರ್ಷ ಅಮೆರಿಕದಲ್ಲಿ ಮರಣದಂಡನೆಗೊಳಗಾದ ಮೊದಲ ಪ್ರಕರಣವಾಗಿರಲಿದೆ.
2001ರಲ್ಲಿ ಆಗ 25 ವರ್ಷ ವಯಸ್ಸಿನ ಡೊನಾಲ್ಡ್ ಗ್ರಾಂಟ್, ಜೈಲಿನಲ್ಲಿರುವ ತನ್ನ ಗೆಳತಿಗೆ ಜಾಮೀನು ಕೊಡಿಸಲು ಬೇಕಾದ ಹಣವನ್ನು ಕದಿಯಲು ಹೋಟೆಲ್ ನಲ್ಲಿ ದರೋಡೆ ಮಾಡಿದ್ದ. ದರೋಡೆ ವೇಳೆ ಇಬ್ಬರು ಹೋಟೆಲ್ ಉದ್ಯೋಗಿಗಳ ಮೇಲೆ ಡೊನಾಲ್ಡ್ ಗುಂಡು ಹಾರಿಸಿದ್ದ. ನ್ಯಾಯಾಲಯದ ದಾಖಲೆಗಳ ಪ್ರಕಾರ ಒಬ್ಬರು ತಕ್ಷಣವೇ ಸತ್ತರು, ಮತ್ತು ಇನ್ನೊಬ್ಬರಿಗೆ ಡೊನಾಲ್ಡ್ ಗ್ರ್ಯಾಂಟ್ ಚಾಕುವಿನಿಂದ ಇರಿದು ಕೊಂದಿದ್ದ.
2005 ರಲ್ಲಿ ಗ್ರಾಂಟ್ ಗೆ ಮರಣದಂಡನೆ ವಿಧಿಸಲಾಯಿತು. ಅಂದಿನಿಂದ ತಮ್ಮ ಶಿಕ್ಷೆಯನ್ನು ರದ್ದುಗೊಳಿಸುವಂತೆ ಹಲವಾರು ಮನವಿಗಳನ್ನು ಸಲ್ಲಿಸಿದ್ದ. ಆದರೆ ಆತನ ಕೊನೆಯ ಮನವಿಯನ್ನೂ ಯುಎಸ್ ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿತು.
46 ವರ್ಷ ವಯಸ್ಸಿನ ಗ್ರಾಂಟ್ ಗೆ ಮ್ಯಾಕ್‌ಅಲೆಸ್ಟರ್‌ನಲ್ಲಿರುವ ಒಕ್ಲಹೋಮ ಸ್ಟೇಟ್ ಪೆನಿಟೆನ್ಷಿಯರಿಯಲ್ಲಿ ಮೂರು ಮಾರಕ ಪದಾರ್ಥಗಳ ಚುಚ್ಚುಮದ್ದನ್ನು ನೀಡಿ ಮರಣದಂಡನೆ ನೀಡಲಾಗುತ್ತದೆ ಎನ್ನಲಾಗಿದೆ.
ಮಾರಣಾಂತಿಕ ಚುಚ್ಚುಮದ್ದು ಅಸಹನೀಯ ನೋವನ್ನು ಉಂಟುಮಾಡುತ್ತದೆ ಎಂದು ಅಂದಾಜಿಸಲಾಗಿದೆ.