ತನ್ನ ಮಗನ ಸಾವಿನ ನಂತರ ಸೊಸೆಗೆ ವಿದ್ಯಾಭ್ಯಾಸ ಕೊಡಿಸಿ, ಕೆಲಸ ದೊರಕಿದ ಮೇಲೆ ಪುನರ್ ವಿವಾಹ ಮಾಡಿಸಿದ ಮಾದರಿ ಅತ್ತೆ

ಇಂದಿಗೂ ಭಾರತದಲ್ಲಿ ಮಹಿಳೆಯರ ವರದಕ್ಷಿಣೆ ಸಾವು ಬಾಲ್ಯ ವಿವಾಹ ಇವೆಲ್ಲಾ ಕಂಡು ಬರುತ್ತದೆ. ಇವುಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಎಲ್ಲೂ ಬದಲಾವಣೆ ಸಂಪೂರ್ಣವಾಗಿ ಸಾಧ್ಯವಾಗಿಲ್ಲ.

ರಾಜಸ್ಥಾನದ ಮಹಿಳೆಯೊಬ್ಬರು ತನ್ನ ಮಗನ ಸಾವಿನ ನಂತರ ತನ್ನ ಸೊಸೆ ಬಗ್ಗೆ ಹೆಚ್ಚಿನ ಪ್ರೀತಿ ಜೊತೆಗೆ ವಿದ್ಯಾಭ್ಯಾಸ ಕೊಡಿಸುವ ಮೂಲಕ ಮಾದರಿ ಅತ್ತೆ ಪಾತ್ರ ವಹಿಸಿದ್ದಾರೆ.

ರಾಜಸ್ಥಾನದ ಫತೇಪುರ್ ಶೇಖಾವತಿಯಲ್ಲಿರುವ ಕಮಲಾ ದೇವಿ ಅವರ ಕಿರಿಯ ಮಗ ಶುಭಂ ಅವರನ್ನು 2016 ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ಅನಂತರ ಈತ ಮಧ್ಯ ಏಷ್ಯಾದ ಕಿರ್ಗಿಸ್ತಾನ್ ನಲ್ಲಿ ಎಂಬಿಬಿಎಸ್ ಪದವಿ ಪಡೆಯಲು ಹೋಗಿದ್ದ. ಅಲ್ಲಿ ಬ್ರೈನ್ ಸ್ಟ್ರೋಕ್ ನಿಂದ ಸಾವಿಗೀಡಾಗಿದ್ದ. ಆದರೂ ಧೃತಿಗೆಡದ ಅಮ್ಮ ತನ್ನ ಸೊಸೆಯಲ್ಲಿ ಮಗನನ್ನು ಕಾಣುತ್ತಾಳೆ. ಆಕೆಗೆ ವಿದ್ಯಾಭ್ಯಾಸ ಮುಂದುವರಿಸಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಂತೆ ಅತ್ತೆ ಪ್ರೋತ್ಸಾಹ ನೀಡುತ್ತಾರೆ. ಆಕೆಯ ಪ್ರೋತ್ಸಾಹ, ಕಾಳಜಿ ಪರಿಣಾಮ ಸೊಸೆ ಇತಿಹಾಸದಲ್ಲಿ ಗ್ರೇಡ್ 1 ಉಪನ್ಯಾಸಕರ ಪದವಿಗೆ ಅರ್ಹತೆ ಪಡೆಯುತ್ತಾಳೆ.

ಅತ್ತೆ ದೇವಿ ಅವರು ಸರಕಾರಿ ಶಾಲೆಯೊಂದರಲ್ಲಿ ಶಿಕ್ಷಕಿ. ಸೊಸೆ ಸುನೀತಾ ಪ್ರಸ್ತುತ ಚುರು ಜಿಲ್ಲೆಯ ಸರ್ದಾರ್ ನಗರದ ನೈನಾಸರ್ ಸುಮೇರಿಯಾದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದೀಗ ವಿಷಯ ಏನೆಂದರೆ ಐದು ವರ್ಷಗಳ ನಂತರ ದೇವಿ ತನ್ನ ಸೊಸೆಯನ್ನು ಮುಖೇಶ್ ಎಂಬ ವ್ಯಕ್ತಿಗೆ ಮದುವೆ ಮಾಡಿಸಿಕೊಟ್ಟಿದ್ದು, ಹಳ್ಳಿಯಲ್ಲಿ ಬಹಳ ಆಡಂಬರದಿಂದ ಮದುವೆ ಮಾಡಿಸಿದ್ದಾರೆ.

ಕಮಲಾ ದೇವಿ ಅವರ ಮಗ ಶುಭಂ ಅವರು ಸುನೀತಾ ಅವರನ್ನು ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿ, ನಂತರ ಇಷ್ಟವಾಗಿ ಮದುವೆ ಮಾಡಲು ಮಾತುಕತೆ ನಡೆಸಲಾಯಿತು. ಇವರ ಸಂಪ್ರದಾಯದಂತೆ ಹುಡುಗಿ ಕಡೆಯವರು ವರದಕ್ಷಿಣೆ ಕೊಡಲು ಬಂದಾಗ ಸ್ವತಃ ದೇವಿಯವರು ನಿರಾಕರಿಸಿದರು. ಅನಂತರದ‌ ಬೆಳವಣಿಗೆಯಲ್ಲಿ ಏನೆಲ್ಲಾ ನಡೆಯಿತು ಅದೆಲ್ಲಾ ವಿಧಿ ಎಂದು ದೇವಿಯವರು ಹೇಳುತ್ತಾರೆ.

ಕಮಲಾ ದೇವಿಯವರು ಹೇಳುವ ಪ್ರಕಾರ ಕಮಲಾದೇವಿಯವರು ಸುನೀತಾಳಲ್ಲಿ ತನ್ನ ಮಗನನ್ನು ಕಾಣುತ್ತಾಳೆ. ಶುಭಂ ಸಾವಿನ ನಂತರ ದೇವಿ ಸುನೀತಾಳನ್ನು ತನ್ನ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದಾರೆ. ಹಾಗೂ ಸುನೀತಾ ಕೂಡಾ ತನ್ನ ಅತ್ತೆ ಹೇಳಿದ ಹಾಗೆ ಕೇಳುತ್ತಿದ್ದಳು ಹಾಗೂ ಅನುಸರಿಸುತ್ತಿದ್ದಳು ಎಂದು ದೇವಿಯ ಹಿರಿಯ ಮಗ ರಜತ್ ಬಂಗ್ವಾರಾ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

Leave A Reply

Your email address will not be published.