ಪಿಂಚಣಿ ಪಡೆಯಲು ಶವವನ್ನೇ ಅಂಚೆ ಕಛೇರಿಗೆ ಒಯ್ದರು!

Share the Article

ಐರ್ಲೆಂಡ್‌ನ ದೇಶದ ಕಾರ್ಲೋದಲ್ಲಿ ಸಿನಿಮೀಯ ಮಾದರಿಯ ಘಟನೆಯೊಂದು ನಡೆದಿದೆ. ಇಬ್ಬರು ವ್ಯಕ್ತಿಗಳು, ಮೃತ ವ್ಯಕ್ತಿಯ ಪಿಂಚಣಿ ಪಡೆದುಕೊಳ್ಳಲು, ಆತನ ಶವವನ್ನೇ ಕಾರ್ಲೊ ಅಂಚೆ ಕಚೇರಿಗೆ ಒಯ್ದಿದ್ದಾರೆ.

ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರಂಭದಲ್ಲಿ ಮೃತ ಪೀಡರ್‌ ಡಾಯ್ರ ಪಿಂಚಣಿ ಪಡೆಯಲು ಇಬ್ಬರು ವ್ಯಕ್ತಿಗಳು, ಅಂಚೆ ಕಚೇರಿಗೆ ತೆರಳಿದ್ದಾರೆ.

ಆಗ ಅಧಿಕಾರಿಗಳು ಸಂಬಂಧಪಟ್ಟ ವ್ಯಕ್ತಿ ಅಥವಾ ಕುಟುಂಬಸ್ಥರೇ ಸ್ಥಳಕ್ಕೆ ಬರಬೇಕು ಎಂದು ತಿಳಿಸಿದ್ದಾರೆ. ಮನೆಗೆ ತೆರಳಿದ ಇಬ್ಬರು ವ್ಯಕ್ತಿಗಳು, ಮುಖವೆಲ್ಲ ಮುಚ್ಚುವಂತೆ ಬಟ್ಟೆ ಹಾಕಿ, ತಲೆಗೆ ಟೋಪಿ ಹಾಕಿ ಡಾಯ್ತರ ಶವವನ್ನು ರಸ್ತೆಯಲ್ಲಿ ಎಳೆದೊಯ್ದಿದ್ದಾರೆ.

ಅಂಚೆ ಅಧಿಕಾರಿಗಳು ಅನುಮಾನ ಬಂದು ಪ್ರಶ್ನಿಸಿದಾಗ, ಡಾಯ್ದಗೆ ಹೃದಯಾಘಾತವಾಗಿದೆ ಎಂದು ವ್ಯಕ್ತಿಗಳು ತಿಳಿಸಿದ್ದಾರೆ. ಸದ್ಯ ಪೊಲೀಸರು ಡಾಯ್ದ ಮೃತಪಟ್ಟಿದ್ದು ಯಾವಾಗ, ಇದರ ಹಿಂದೇನಿದೆ ಎಂದು ತನಿಖೆ ನಡೆಸುತ್ತಿದ್ದಾರೆ.

Leave A Reply