ಆಸ್ತಿಯ ಆಸೆಗೆ ಬಿದ್ದು 70 ವರ್ಷದ ಅಜ್ಜಿಯ ಮೇಲೆ ನಾಯಿಯಿಂದ ದಾಳಿ ಮಾಡಿಸಿದ ಮೊಮ್ಮಗ!

ಇತ್ತೀಚೆಗೆ ಅದೆಷ್ಟೋ ಪ್ರಕರಣಗಳು ಆಸ್ತಿಗೆ ಸಂಬಂಧಿಸಿದಂತೆ ನಡೆದುಹೋಗಿದೆ. ತನ್ನ ಒಡನಾಡಿಗಳು, ಹೆತ್ತವರೂ ಎಂದು ನೋಡದೆ ಅವರ ಮೇಲೆ ಹಲ್ಲೆ, ಕೊಲೆ ಮಾಡಿರೋದು ನೋಡಿದ್ದೇವೆ. ಇಂತಹ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕೊನೆಯೆಂದೊ ಅರಿಯದಾಗಿದೆ!!

ಇದೀಗ ಇಂತಹುದೇ ಸಾಲಿಗೆ ದೆಹಲಿಯಲ್ಲಿ ನಡೆದಿದ್ದು, ಆಸ್ತಿಯ ಆಸೆಗೆ ಬಿದ್ದ ಮೊಮ್ಮಗ 70 ವರ್ಷದ ಅಜ್ಜಿಯ ಮೇಲೆ ನಾಯಿಯಿಂದ ಪದೇ ಪದೇ ದಾಳಿ ಮಾಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಅಜ್ಜಿ ಬಳಿ ಇರುವ ಆಸ್ತಿ ದೋಚುವ ಉದ್ದೇಶದಿಂದ ಮೊಮ್ಮಗ ಈ ರೀತಿಯಾಗಿ ನಡೆದುಕೊಂಡಿದ್ದು, ದೆಹಲಿ ಮಹಿಳಾ ಆಯೋಗಕ್ಕೆ ಮಾಹಿತಿ ಗೊತ್ತಾಗುತ್ತಿದ್ದಂತೆ ಇದೀಗ ಆರೋಪಿ ಮೊಮ್ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ನೋಟಿಸ್​ ಸಹ ಜಾರಿ ಮಾಡಲಾಗಿದೆ.


Ad Widget

Ad Widget

Ad Widget

ಪೂರ್ವ ದೆಹಲಿಯ ವಿನೋದ್​ ನಗರ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಗೆ ಆಕೆಯ ಮೊಮ್ಮಗ ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಕಿರುಕುಳ ನೀಡಿದ್ದಾನೆ. ಇದರ ಜೊತೆಗೆ ನಾಯಿಯಿಂದ ಮೇಲಿಂದ ಮೇಲೆ ದಾಳಿ ಮಾಡಿಸಿ, ಕಚ್ಚಿಸಲು ಪ್ರಯತ್ನಿಸಿದ್ದಾನೆ. ಜನವರಿ 13ರಂದು ದಾಳಿ ಮಾಡಿಸಿದಾಗ ಅದು ಅಜ್ಜಿಗೆ ಕಚ್ಚಿ, ಗಾಯಗೊಳಿಸಿದೆ

ಮೊಮ್ಮಗನ ದುಷ್ಕೃತ್ಯದಿಂದ ಬೇಸತ್ತ 70 ವರ್ಷದ ವೃದ್ಧೆ, ಕಳೆದ ಜನವರಿ 20ರಂದು ಸಹಾಯವಾಣಿ ಮೂಲಕ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ಇದರ ಬೆನ್ನಲ್ಲೇ ವೃದ್ಧೆಯನ್ನ ಭೇಟಿ ಮಾಡಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಹಾಯ ಮಾಡಿದ್ದಾರೆ.ಮಹಿಳಾ ಆಯೋಗದ ತಂಡ ಅಜ್ಜಿಯನ್ನ ಭೇಟಿ ಮಾಡಿರುವ ಸಂದರ್ಭದಲ್ಲಿ ಆಕೆಯ ಕೈಯಲ್ಲಿ ನಾಯಿ ಕಚ್ಚಿರುವ ತೀವ್ರ ಗಾಯ ಕಂಡು ಬಂದಿದ್ದು,ಈ ವೇಳೆ ಪ್ರಕರಣದ ಗಂಭೀರತೆ ಅರಿತು ಆರೋಪಿಯ ಬಂಧನಕ್ಕೆ ನೋಟಿಸ್ ಜಾರಿ ಮಾಡಿದೆ.

Leave a Reply

error: Content is protected !!
Scroll to Top
%d bloggers like this: